ಜಗತ್ತಿನ ಅತ್ಯಂತ ಮೌಲ್ಯಯುತ ಕಾರಿನ ಉತ್ಪಾದಕ ಟೆಸ್ಲಾ ಭಾರತದಲ್ಲಿ ತನ್ನ ಕಾರ್ಯವನ್ನು ಆರಂಭಿಸಿದ್ದು, ಬೆಂಗಳೂರಿನಲ್ಲಿ ಇದೇ ತಿಂಗಳು ತನ್ನ ಕಾರ್ಯಾಲಯ ಆರಂಭಿಸಲಿದೆ.
ಐಟಿ ಸಿಟಿಯಲ್ಲಿ ತಲೆಯೆತ್ತಿರುವ ಟೆಸ್ಲಾ ಇಂಡಿಯಾದ ಹೆಸರಿನಲ್ಲಿ ನೋಂದಣಿಯಾಗಿರುವ ಹೈರೈಸ್ ಕಟ್ಟಡದ ವಿಡಿಯೋವೊಂದು ವೈರಲ್ ಆಗಿದೆ. ಭಾರತದಲ್ಲಿ ತನ್ನ ಸಂಶೋಧನೆ & ಅಭಿವೃದ್ಧಿ (R&D) ಮತ್ತು ಉತ್ಪಾದನಾ ಜಾಲ ತೆರೆಯಲು ಟೆಸ್ಲಾ ಮುಂದಾಗಿದೆ.
ದೇಶದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಟೆಸ್ಲಾ ಹೂಡಿಕೆ ಮಾಡಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲು ಮುಂದಾಗಿದೆ. ಟೆಸ್ಲಾದ ಮಾಡೆಲ್ 3 ಭಾರತದ ಮಾರುಕಟ್ಟೆ ಶೀಘ್ರವೇ ಪ್ರವೇಶಿಸುವ ಸಾಧ್ಯತೆ ಇದೆ.
https://www.youtube.com/watch?v=kSb8KDkppyo