ಬೆಂಗಳೂರು: ಕೊರೋನಾ ಕಾರಣದಿಂದ ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಟಿಪ್ಪು ಸುಲ್ತಾನ್, ಜೀಸಸ್, ಪ್ರವಾದಿ ಮತ್ತು ರಾಣಿ ಅಬ್ಬಕ್ಕ ಸೇರಿದಂತೆ ಹಲವು ಪಠ್ಯಗಳನ್ನು ಕಡಿತ ಮಾಡಲಾಗಿದೆ.
ಕೊರೋನಾ ಕಾರಣದಿಂದ ಈ ವರ್ಷ ಕಡಿಮೆ ದಿನಗಳು ಶಾಲೆ ನಡೆಯಲಿವೆ. ಸೆಪ್ಟೆಂಬರ್ ಒಂದರಿಂದ ಶಾಲೆ ಆರಂಭಿಸಬಹುದು ಎಂಬ ನಿರೀಕ್ಷೆ ಇದ್ದು ಇದಕ್ಕೆ ಅನುಗುಣವಾಗಿ ಪಠ್ಯ ಕಡಿತ ಮಾಡಲಾಗಿದೆ. ಇದರಲ್ಲಿ ಅಬ್ಬಕ್ಕದೇವಿ, ಚಳವಳಿಗಳು ಸೇರಿ ಹಲವು ಪಾಠಗಳನ್ನು ಕೈಬಿಡಲಾಗಿದೆ. ಟಿಪ್ಪುಸುಲ್ತಾನ್, ಹೈದರಾಲಿ ವಿಷಯಗಳನ್ನು ಏಳನೇ ತರಗತಿಯಲ್ಲಿ ಕೈಬಿಟ್ಟಿದ್ದು 8ನೇ ತರಗತಿಯಲ್ಲಿ ಈ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಟಿಪ್ಪುಸುಲ್ತಾನ್ ವಿಚಾರ ಒಂದು ಜಾತಿ ವರ್ಗಕ್ಕೆ ಸೀಮಿತವಾಗಿಲ್ಲ. ಇತಿಹಾಸದ ಭಾಗವಾಗಿದೆ. ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಇರಿಹಾಸ ತಿರುಚಲು ಹೊರಟಿದೆ ಎಂದು ಟೀಕಿಸಿದ್ದಾರೆ.