ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಏರುಗತಿಯಲ್ಲಿದ್ದ ಕೊರೊನಾ ಸೋಂಕು ಹರಡುವಿಕೆ ಮತ್ತು ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ.
ಕಳೆದ 5 ದಿನಗಳಿಂದಲೂ ಸೋಂಕಿನ ದರ ಇಳಿಕೆಯಾಗುತ್ತಿದ್ದು, ಆತಂಕದ ನಡುವೆ ಶುಭ ಸುದ್ದಿ ಬಂದಿದೆ. ಪರೀಕ್ಷೆಯನ್ನು ತೀವ್ರ ಏರಿಕೆ ಮಾಡಿರುವ ಕಾರಣ ಸಮುದಾಯಕ್ಕೆ ಸೋಂಕು ಹರಡಿರುವ ಕುರಿತಾಗಿ ಪರೀಕ್ಷಿಸಲು ರ್ಯಾಂಡಮ್ ಪರೀಕ್ಷೆ ಕೈಗೊಳ್ಳಲಾಗಿದೆ. ಪರೀಕ್ಷೆ ಹೆಚ್ಚಾದಂತೆ ಸೋಂಕು ಕಡಿಮೆಯಾಗಿದೆ. ಆರೋಗ್ಯ ಇಲಾಖೆ ಸಮುದಾಯಕ್ಕೆ ಸೋಂಕು ಹರಡಿಲ್ಲ ಎಂದು ತೀರ್ಮಾನಕ್ಕೆ ಬಂದಿದೆ. ಆದರೆ ಜನ ಮೈ ಮರೆಯುವಂತಿಲ್ಲ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕಿದೆ.
ಪ್ರತಿ 100 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಸೋಂಕಿತರ ಪ್ರಮಾಣ ಜುಲೈ 16 ರಿಂದ ಕಡಿಮೆಯಾಗತೊಡಗಿದೆ. ಬೆಂಗಳೂರಲ್ಲಿ ಹೆಚ್ಚು ಕಡಿಮೆ ರಾಜ್ಯದ ಅರ್ಧದಷ್ಟು ಕೇಸ್ ಗಳು ಇದ್ದು, ಅಲ್ಲಿಯೂ ಪರೀಕ್ಷೆ ಹೆಚ್ಚಿದಂತೆ ಸೋಂಕು ಇಳಿಕೆಯಾಗತೊಡಗಿದೆ ಎನ್ನಲಾಗಿದೆ.