ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ಸರ್ವ ಸೇವೆಗೆ ಅವಕಾಶ ನೀಡಲಾಗಿದೆ. ಅದ್ದೂರಿ ಉತ್ಸವ, ಬ್ರಹ್ಮರಥೋತ್ಸವಗಳಿಗೆ ಅವಕಾಶ ಇರುವುದಿಲ್ಲ. ಸರಳವಾಗಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ.
ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದ್ದು, ಇದರೊಂದಿಗೆ ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ, ಅಭಿಷೇಕ ಸೇರಿದಂತೆ ಎಲ್ಲಾ ಸೇವೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ.
ಸಾಮಾಜಿಕ ಅಂತರ ಸೇರಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದೇವಾಲಯದಲ್ಲಿ ಸೇವಾಕಾರ್ಯ ಕೈಗೊಳ್ಳಬಹುದಾಗಿದೆ. ಸೆಪ್ಟಂಬರ್ 1 ರಿಂದ ಜಾರಿಯಾಗುವಂತೆ ಸುತ್ತೋಲೆ ಹೊರಡಿಸಲಾಗಿದ್ದು, ದೇವಾಲಯಗಳಲ್ಲಿ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸುತ್ತಿದ್ದ ಸೇವೆ ಹಾಗೂ ಪೂಜೆಗಳನ್ನು ಮುಂದುವರಿಸಬೇಕು ಎಂದು ಹೇಳಲಾಗಿದೆ.
ಜಾತ್ರಾ ಉತ್ಸವ, ಬ್ರಹ್ಮ ರಥೋತ್ಸವ ಮೊದಲಾದ ಉತ್ಸವಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಹೇಳಲಾಗಿದ್ದು, ಉತ್ಸವಗಳ ದಿನಗಳಂದು ದೇವಾಲಯದ ಒಳ ಪ್ರಕಾರದಲ್ಲಿ ಜನಸಂದಣಿಯಿಲ್ಲದೇ ಸರಳವಾಗಿ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.