ಕೈ ಹಿಡಿದು ನಡೆಸುವವರೆಲ್ಲ ಗುರುಗಳು. ಸನ್ಮಾರ್ಗದಲ್ಲಿ ನಡೆಸಲು, ಉತ್ತಮ ಭವಿಷ್ಯಕ್ಕೆ ದಾರಿ ದೀಪ ಶಿಕ್ಷಕರು. ವಿದ್ಯಾಭ್ಯಾಸದಿಂದ ಹಿಡಿದು ಒಳ್ಳೆ ನಡತೆಯವರೆಗೆ ಎಲ್ಲವನ್ನೂ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ. ಶಾಲೆಗೆ ಹೋಗುವ ಮಕ್ಕಳಿಗೆ ಶಿಕ್ಷಕರೆಂದ್ರೆ ಪಂಚಪ್ರಾಣ. ಶಿಕ್ಷಕರು ಹೇಳಿದ್ದೇ ವೇದವಾಕ್ಯ. ಶಿಕ್ಷಕರ ಮಾತಿಗೆ ಮಕ್ಕಳು ತಪ್ಪುವುದಿಲ್ಲ.
ಸೆಪ್ಟೆಂಬರ್ 5, ಇಂದು ಶಿಕ್ಷಕರ ದಿನ. ಸರ್ವಪಲ್ಲಿ ರಾಧಾಕೃಷ್ಣನ್ ಅವ್ರ ಗೌರವಾರ್ಥವಾಗಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನದಂದು ನಿಮ್ಮ ನೆಚ್ಚಿನ ಗುರುಗಳಿಗೆ ಉಡುಗೊರೆ ನೀಡಲು ಮುಂದಾಗಿದ್ದರೆ ಈ ಕೆಳಗಿನ ಉಡುಗೊರೆಗಳನ್ನು ನೀವು ನೀಡಬಹುದು. ಇವು ನಿಮ್ಮ ಬಜೆಟ್ ಗೆ ಹೊಂದಿಕೊಳ್ಳುವುದಲ್ಲದೆ ಶಿಕ್ಷಕರಿಗೆ ಇಷ್ಟವಾಗಲಿದೆ.
ಪೆನ್, ಡೈರಿ : ಇದು ಎಲ್ಲ ಶಿಕ್ಷಕರಿಗೆ ಇಷ್ಟವಾಗುವ ಉಡುಗೊರೆ. ಪೆನ್, ಡೈರಿಯಂತಹ ಒಳ್ಳೆ ಉಡುಗೊರೆ ಮತ್ತೊಂದಿಲ್ಲ. ಡೈರಿಯಲ್ಲಿ ಶುಭಾಶಯ ಅಥವಾ ಪದ್ಯ ಬರೆದು ನೀಡಬಹುದು.
ಪುಸ್ತಕ : ಗುರುಗಳಿಗೆ ಓದುವ ಅಭ್ಯಾಸವಿದ್ದೇ ಇರುತ್ತದೆ. ಹಾಗಾಗಿ ಶಿಕ್ಷಕರ ದಿನದಂದು ನೆಚ್ಚಿನ ಗುರುಗಳಿಗೆ ಪುಸ್ತಕ ಅಥವಾ ಅವರಿಷ್ಟದ ಕಾದಂಬರಿಯನ್ನು ಉಡುಗೊರೆ ರೂಪದಲ್ಲಿ ನೀಡಬಹುದು.
ಗ್ರೀಟಿಂಗ್ಸ್ ಕಾರ್ಡ್ : ಮೊಬೈಲ್ ಸಂದೇಶಗಳು ಬಂದ ಮೇಲೆ ಗ್ರೀಟಿಂಗ್ಸ್ ಮಹತ್ವ ಕಳೆದುಕೊಂಡಿದೆ ಎನ್ನುವವರಿದ್ದಾರೆ. ಆದ್ರೆ ಸದಾ ನೆನಪಿನಲ್ಲಿ ಜೊತೆಗಿರುವ ವಸ್ತು ಇದು. ಹಾಗಾಗಿ ಗ್ರೀಟಿಂಗ್ಸ್ ಕಾರ್ಡ್ ಪಡೆದು ಅದ್ರಲ್ಲಿ ನಿಮಗಿಷ್ಟವಾದ ವಿಷ್ಯ ಬರೆದು ಉಡುಗೊರೆ ನೀಡಬಹುದು.
ಫೋಟೋ ಫ್ರೇಮ್ : ಹಳೆ ನೆನಪುಗಳನ್ನು ಮೆಲಕು ಹಾಕಲು ಇದು ಸಹಕಾರಿ. ಗುರುಗಳ ಜೊತೆಗಿರುವ ಫೋಟೋಗಳನ್ನು ಒಂದು ಮಾಡಿ ಉಡುಗೊರೆ ರೂಪದಲ್ಲಿ ನೀಡಬಹುದು.
ಹೂ, ಚಾಕಲೇಟ್ : ಅತ್ಯುತ್ತಮ ಹಾಗೂ ಕಡಿಮೆ ಬಜೆಟ್ ಉಡುಗೊರೆಗಳಲ್ಲಿ ಇದೂ ಒಂದು. ಗುರುಗಳಿಗೆ ಇಷ್ಟವಾಗುವ ಹೂ ಅಥವಾ ಚಾಕೋಲೇಟನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.