ಕೊಡಗು ಜಿಲ್ಲೆ ತಲಕಾವೇರಿ ಭೂಕುಸಿತ ಪ್ರಕರಣದಲ್ಲಿ ಮೃತಪಟ್ಟ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ಯ ಅವರ ಪುತ್ರಿಯರಿಗೆ ಪರಿಹಾರ ಕೊಡಬಾರದೆಂದು ಒತ್ತಾಯ ಕೇಳಿಬಂದಿದೆ.
5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಜಿಲ್ಲಾಡಳಿತದಿಂದ ನಾರಾಯಣಾಚಾರ್ಯ ಕುಟುಂಬಕ್ಕೆ ನೀಡಲಾಗಿದೆ. ಆದರೆ ಅವರ ಪುತ್ರಿಯರು ಹೆಸರು ಬದಲಾವಣೆ ಮಾಡಿಕೊಡಲು ಚೆಕ್ ಹಿಂತಿರುಗಿಸಿದ್ದಾರೆ. ಬೇರೆ ಹೆಸರಿಗೆ ಚೆಕ್ ನೀಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಕೊಡಗಿನ ಕಾವೇರಿ ಸೇನೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು ನಾರಾಯಣಾಚಾರ್ ಇಬ್ಬರು ಪುತ್ರಿಯರು ಹಿಂದೂಧರ್ಮದಿಂದ ಮತಾಂತರಗೊಂಡಿದ್ದಾರೆ. ಅವರಿಗೆ ಪರಿಹಾರ ನೀಡಿದರೆ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಹೇಳಲಾಗಿದೆ. ನಾರಾಯಣಾಚಾರ್ಯ ಅವರ ಸಹೋದರಿಗೆ ಪರಿಹಾರ ಚೆಕ್ ಕೊಡಬೇಕೆಂದು ಮನವಿ ಮಾಡಲಾಗಿದೆ.