ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಮಠವೊಂದರ ಸ್ವಾಮೀಜಿಯೊಬ್ಬರ ಕಾಮಕಾಂಡ ಬಯಲಾಗಿದೆ. ಮಹಿಳೆಯೊಂದಿಗೆ ಸ್ವಾಮೀಜಿಯೊಬ್ಬ ರಾಸಲೀಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಸ್ವಾಮೀಜಿಯೊಂದಿಗೆ ರಾಸಲೀಲೆ ನಡೆಸಿದ ಮಹಿಳೆ ವಿಡಿಯೋ ಮಾಡಿಕೊಂಡು ಮತ್ತೊಬ್ಬ ಸ್ವಾಮೀಜಿಯೊಂದಿಗೆ ಮಾತನಾಡಿರುವ ಆಡಿಯೋ ಬಹಿರಂಗವಾಗಿ ಮಠದ ಭಕ್ತರಲ್ಲಿ ಮುಜುಗರ ಉಂಟಾಗಿದೆ ಎನ್ನಲಾಗಿದೆ.
ನವಲಗುಂದ ತಾಲ್ಲೂಕಿನ ಪ್ರತಿಷ್ಠಿತ ಮಠ ಇದಾಗಿದ್ದು, ನರ್ಸ್ ಆಗಿರುವ ಮಹಿಳೆ ಜೊತೆ ನಡೆಸಿದ ಕಾಮಕೇಳಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿರುವ ಮಹಿಳೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಮತ್ತೊಬ್ಬ ಮಠಾಧೀಶರೊಂದಿಗೆ ಮಾತನಾಡಿದ ಆಡಿಯೋ ಕೂಡ ವೈರಲ್ ಆಗಿದೆ. ಆಡಿಯೋದಲ್ಲಿ ಸ್ವಾಮೀಜಿಯ ಕಾಮಪುರಾಣ, ಮಾಂಸ, ಮದ್ಯಸೇವನೆ, ಮೊದಲಾದ ವಿಚಾರ ಕೂಡ ಬಯಲಾಗಿದೆ ಎಂದು ಹೇಳಲಾಗಿದೆ.