ಬೆಂಗಳೂರು: ಸರ್ಕಾರ ಕೇಳಿದಷ್ಟು ಬೆಡ್ ಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದೊಂದಿಗಿನ ಒಪ್ಪಂದದಂತೆ ಶೇಕಡ 50 ರಷ್ಟು ಬೆಡ್ ಗಳನ್ನು ನೀಡಬೇಕು. ಸರ್ಕಾರದ ಜತೆಗಿನ ಒಪ್ಪಂದವನ್ನು ಪಾಲಿಸದಿದ್ದರೆ ವಿದ್ಯುತ್, ನೀರಿನ ಸಂಪರ್ಕ ಕಡಿತ ಮಾಡಲಾಗುವುದು ಎಂದು ವಾರ್ನಿಂಗ್ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆ ಒಪಿಡಿ ಕ್ಲೋಸ್ ಮಾಡಿಸಲಾಗುವುದು. ಆಸ್ಪತ್ರೆಯ ಮಾನ್ಯತೆ ರದ್ದು ಮಾಡಲು ಹಿಂದೆ ಮುಂದೆ ನೋಡಲ್ಲ ಎಂದು ಆಸ್ಪತ್ರೆ ಮಾಲೀಕರಿಗೆ ಸುಧಾಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.