ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 8642 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಲ್ಲಿ ಬರೋಬ್ಬರಿ 2804 ಜನರಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 96,910 ಕ್ಕೆ ಏರಿಕೆಯಾಗಿದೆ. ಇವತ್ತು 2549 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ. ಇದುವರೆಗೆ 62,041 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 33,280 ಸಕ್ರಿಯ ಪ್ರಕರಣಗಳಿದ್ದು, ಇವತ್ತು 56 ಜನ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೆ 1588 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು ಬಾಗಲಕೋಟೆ 163, ಬಳ್ಳಾರಿ 537, ಬೆಳಗಾವಿ 379, ಬೆಂಗಳೂರು ಗ್ರಾಮಾಂತರ 68, ಬೀದರ್ 43, ಚಾಮರಾಜನಗರ 111, ಚಿಕ್ಕಬಳ್ಳಾಪುರ 73, ಚಿಕ್ಕಮಗಳೂರು 100, ಚಿತ್ರದುರ್ಗ 47 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.
ದಕ್ಷಿಣ ಕನ್ನಡ 234, ದಾವಣಗೆರೆ 228, ಧಾರವಾಡ 253, ಗದಗ 149, ಹಾಸನ 228, ಹಾವೇರಿ 137, ಕಲಬುರ್ಗಿ 154, ಕೊಡಗು 38, ಕೋಲಾರ 86, ಕೊಪ್ಪಳ 133, ಮಂಡ್ಯ 185, ಮೈಸೂರು 562, ರಾಯಚೂರು 153, ರಾಮನಗರ 126, ಶಿವಮೊಗ್ಗ 915, ತುಮಕೂರು 94, ಉಡುಪಿ 375, ಉತ್ತರಕನ್ನಡ 119, ವಿಜಯಪುರ 107, ಯಾದಗಿರಿ ಜಿಲ್ಲೆಯ 41 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಇಂದು ಬೆಂಗಳೂರಿನಲ್ಲಿ 56, ಬಳ್ಳಾರಿಯಲ್ಲಿ 9, ಬೆಳಗಾವಿಯಲ್ಲಿ 3, ದಾವಣಗೆರೆ 7, ಧಾರವಾಡ 9, ಕೊಪ್ಪಳ 8, ದಕ್ಷಿಣಕನ್ನಡ 4, ತುಮಕೂರು 5, ಮೈಸೂರು 5 ಜನ ಸೇರಿದಂತೆ ರಾಜ್ಯದಲ್ಲಿ 126 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.