alex Certify ಲಾಕ್​ಡೌನ್​ ಮುಂದುವರಿಕೆ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಎಸ್​. ಟಿ. ಸೋಮಶೇಖರ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್​ಡೌನ್​ ಮುಂದುವರಿಕೆ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ ಎಸ್​. ಟಿ. ಸೋಮಶೇಖರ್​​

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಮೇ 24ರವರೆಗೂ ಲಾಕ್​ಡೌನ್​ ಆದೇಶ ವಿಧಿಸಲಾಗಿದೆ. ಈಗಾಗಲೇ ಕೊರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ಅವಧಿಯನ್ನ ವಿಸ್ತರಿಸೋದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಡ್ತಿದ್ದಾರೆ. ಮೈಸೂರಿನಲ್ಲಿ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಸ್​.ಟಿ. ಸೋಮಶೇಖರ್​​ ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದ್ರು.

ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೊದಲು ಜನತಾ ಕರ್ಫ್ಯೂವನ್ನ ಜಾರಿಗೆ ತಂದಿತು. ಆದರೆ ಈ ವೇಳೆಯಲ್ಲೂ ಜನರನ್ನ ನಿಯಂತ್ರಣ ಮಾಡೋದು ಸಾಧ್ಯವಾಗದ ಕಾರಣ ಲಾಕ್​ಡೌನ್​ ಆದೇಶವನ್ನ ತರಲಾಯ್ತು. ಲಾಕ್​ಡೌನ್​ ಹೇರಿದ್ರೂ ಸಹ ಜನರು ಅನವಶ್ಯಕವಾಗಿ ಬೀದಿಗಳಲ್ಲಿ ಓಡಾಡುತ್ತಾರೆ. ದಿನಸಿ ಅಂಗಡಿ ಪ್ರತಿದಿನ ತೆರೆದಿದ್ರೂ ಸಹ ಜನರು ಒಂದೇ ದಿನ ಎಲ್ಲವನ್ನೂ ಕೊಂಡುಕೊಳ್ಳಬೇಕು ಅಂತಾ ಬರುತ್ತಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್​ಡೌನ್ ಆದೇಶ ಮೇ 24ರವರೆಗೂ ಇರಲಿದೆ. ಈ ಲಾಕ್​ಡೌನ್​ ಮುಗಿಯಲು ಇನ್ನೂ ಸಮಯವಿದೆ. ಆನಂತರ ಲಾಕ್​ಡೌನ್​ ಆದೇಶ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗುತ್ತೆ ಎಂದು ಹೇಳಿದ್ರು.

ಇನ್ನು ಮೈಸೂರಿನ ಕೆ. ಆರ್.​ ಆಸ್ಪತ್ರೆಯಲ್ಲಿ ವೈದ್ಯರ ಮೇಲಿನ ಹಲ್ಲೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವ್ರು, ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದೇನೆ. ಯಾರೇ ಆಗಿದ್ದರೂ ಸಹ ವೈದ್ಯರ ಮೇಲೆ ಹಲ್ಲೆ ಮಾಡೋದು ಸರಿಯಲ್ಲ. ಈ ಪ್ರಕರಣದ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಇನ್ಮುಂದೆ ವೈದ್ಯರಿಗೆ ಯಾವುದೇ ತೊಂದರೆ ಆಗದಂತೆ ಬಂದೋಬಸ್ತ್​ ಮಾಡಲಾಗುತ್ತೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...