ಬೆಂಗಳೂರು: ಒಂದೆಡೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಆರಂಭವಾಗಿದ್ದರೆ ಇನ್ನೊಂದೆಡೆ ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಆರಂಭವಾಗಿ, ಇಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕುರುಬರ ರಣಕಹಳೆ ಆರಂಭವಾಗಿದ್ದು, ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ನೆಲಮಂಗಲದ ಬಳಿಯಿರುವ ಅಂತರಾಷ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಬೃಹತ್ ಸಮಾವೇಶ ಆರಂಭವಾಗಿದೆ.
ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ; 5 ಅಂಗಡಿಗಳು ಸುಟ್ಟು ಭಸ್ಮ
ಪರಿಶಿಷ್ಠ ವರ್ಗಕ್ಕೆ ಈಗಿರುವ 3 ಪ್ರತಿಶತ ಮೀಸಲಾತಿಯ ಪ್ರಮಾಣವನ್ನು ಕನಿಷ್ಠ 7ಕ್ಕೆ ಏರಿಸಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ. ಕುರುಬ ಸಮುದಾಯ ಕೂಡ ಉಳಿದ ಪರಿಷ್ಠ ವರ್ಗದ ಸಮುದಾಯದಂತೆ ಮೂಲತ: ಬುಡಕಟ್ಟು ಜನಾಂಗದಿಂದ ಬಂದಿದೆ. ಈ ಬಗ್ಗೆ ಬ್ರಿಟೀಷ್ ಕಾಲದಿಂದಲೂ ದಾಖಲೆಗಳಿವೆ ಹೀಗಾಗಿ ತಮ್ಮನ್ನು ಪರಿಶಿಷ್ಠ ವರ್ಗಕ್ಕೆ ಸೇರಿಸಬೇಕು ಎಂಬುದು ಸಮುದಾಯದ ಮುಖಂಡರು, ಸ್ವಾಮೀಜಿಗಳ ಒತ್ತಾಯ