ಕೊರೊನಾ ಮಹಾಮಾರಿಯ ನಡುವೆ ಶಾಲಾ ಕಾಲೇಜುಗಳ ಆರಂಭ ಸಂಪೂರ್ಣವಾಗಿ ಇನ್ನೂ ಆಗಿಲ್ಲ. ಇತ್ತೀಚೆಗಷ್ಟೆ ಕಾಲೇಜುಗಳನ್ನು ಸರ್ಕಾರ ಆರಂಭ ಮಾಡಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿ ಆರಂಭ ಮಾಡೋದಕ್ಕೆ ನಿರ್ಧಾರ ಮಾಡಲಾಗಿದೆ. ಇದೆಲ್ಲದರ ನಡುವೆ ಶೈಕ್ಷಣಿಕ ವರ್ಷ ಮುಗಿಯೋದಿಕ್ಕೆ ಕೆಲವೇ ತಿಂಗಳು ಮಾತ್ರ ಬಾಕಿ ಇವೆ. ಹೀಗಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಪರೀಕ್ಷೆ ಚಿಂತೆ ಪ್ರಾರಂಭವಾಗಿದೆ.
ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಮಾಡಲಾಗುತ್ತಿದ್ದರೂ ಆಫ್ ಲೈನ್ ಕ್ಲಾಸ್‌ಗಳು ಜನವರಿಯಿಂದ ಪ್ರಾರಂಭವಾಗುತ್ತಿವೆ. ಹೀಗಾಗಿ ಅಕಸ್ಮಾತ್ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸಿದರೆ ಹೇಗೆ ಎನ್ನುವ ಭೀತಿ ಕೂಡ ಇದೆ. ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸುರೇಶ್ ಕುಮಾರ್, ಪೋಷಕರು ಹಾಗೂ ಮಕ್ಕಳಿಗೆ ಅಭಯ ನೀಡಿದ್ದಾರೆ.
ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಯೋದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ ಬಿಡುಗಡೆ ಮಾಡಲಾಗುತ್ತದೆ. ಹಾಗೂ ಪರೀಕ್ಷೆ ಸಂಬಂಧ ಪೋಷಕರು, ಶಿಕ್ಷಕರು, ಶಾಲಾ ಒಕ್ಕೂಟಗಳ ಜೊತೆ ಚರ್ಚೆ ನಡೆಸಿಯೇ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ ಎಂದಿದ್ದಾರೆ.