ಕೊರೊನಾ ಸಂಕಷ್ಟದ ಕಾರಣಕ್ಕೆ ಬಂದ್ ಆಗಿದ್ದ ಶಾಲಾ – ಕಾಲೇಜುಗಳು ಇದೀಗ ಹಂತಹಂತವಾಗಿ ಆರಂಭವಾಗುತ್ತಿವೆ. ಪಿಯುಸಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿ ಈಗಾಗಲೇ ಆರಂಭವಾಗಿದ್ದು, ಪರೀಕ್ಷಾ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ.
ಇದೀಗ 10ನೇ ತರಗತಿ ಪರೀಕ್ಷೆಗೆ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು ವಿಸ್ತರಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆದೇಶ ಹೊರಡಿಸಿದೆ. ಫೆಬ್ರವರಿ 23ರ ವರೆಗೆ ನೋಂದಣಿಗೆ ಅವಕಾಶವಿದ್ದು, ಶುಲ್ಕ ಪಾವತಿ ದಿನಾಂಕವನ್ನು ಮಾರ್ಚ್ 4 ರವರೆಗೆ ವಿಸ್ತರಿಸಲಾಗಿದೆ.
BIG NEWS: ಶಾಲೆ ಪುನಾರಂಭ -6 ರಿಂದ 8 ನೇ ತರಗತಿ ಆರಂಭದ ಬಗ್ಗೆ ಇಂದು ನಿರ್ಧಾರ
ಅಲ್ಲದೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವೆಬ್ಸೈಟ್ನಲ್ಲಿ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಅನ್ನು ಫೆಬ್ರವರಿ 25 ರಿಂದ ಮಾರ್ಚ್ 2 ರ ವರೆಗೆ ಮುದ್ರಿಸಿಕೊಳ್ಳಬಹುದಾಗಿದ್ದು, ಫೆಬ್ರವರಿ 25 ರಿಂದ ಮಾರ್ಚ್ 4 ರವರೆಗೆ ಬ್ಯಾಂಕ್ ಮೂಲಕ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಮಂಡಳಿಗೆ ಅಗತ್ಯ ದಾಖಲಿಸಲು ಮಾರ್ಚ್ 10ರವರೆಗೆ ಅವಕಾಶ ಕಲ್ಪಿಸಲಾಗಿದೆ.