ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣ ಸಂಬಂಧ ಜೆಡಿಎಸ್ ಎಂಎಲ್ಸಿ ಬಿ. ಎಂ. ಫಾರೂಖ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್ ಗಲಾಟೆ ವೇಳೆ ಅವರನ್ನ ಬಲವಂತವಾಗಿ ಖುರ್ಚಿಯಿಂದ ಕೆಳಗಿಳಿಸಲಾಗಿತ್ತು. ಈ ಘಟನೆ ಬಳಿಕ ಅವರು ತುಂಬಾನೇ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
ಈ ಘಟನೆ ಬಳಿಕ ನಾನು ಧರ್ಮೇಗೌಡರನ್ನ ಭೇಟಿ ಮಾಡಿದ್ದೆ. ಅವರು ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಅವರು ಉಪಸಭಾಪತಿ ಸ್ಥಾನವನ್ನ ಬಯಸಿಯೇ ಇರಲಿಲ್ಲ. ಅವರ ಮುಖಭಾವ ನೋಡ್ತಾ ಇದ್ದ ನನಗೆ ಅವರನ್ನ ಆ ಗಲಾಟೆ ನಡೆಯುವ ದಿನ ಯಾರದ್ದೋ ಮಾತಿನಿಂದ ಪ್ರಭಾವಿತರಾಗಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದರು ಎಂದೆನಿಸಿತ್ತು ಅಂತಾ ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಚಿಕ್ಕಮಗಳೂರು ರೈಲ್ವೆ ಹಳಿಯ ಬಳಿ ಧರ್ಮೇಗೌಡರ ಮೃತದೇಹ ಲಭ್ಯವಾಗಿತ್ತು. ವಿಧಾನ ಪರಿಷತ್ ಗಲಾಟೆಯಿಂದ ಮನನೊಂದಿದ್ದ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.