ಮಧ್ಯಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಏಷ್ಯಾದ ಅತಿದೊಡ್ಡ ಘಟಕ ಎಂದು ಹೇಳಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಪಾವಗಡದಲ್ಲಿರುವ 2000 ಮೆಗಾವ್ಯಾಟ್ ಸೋಲಾರ್ ಸ್ಥಾವರ ಏನು ಎಂದು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದಲ್ಲಿ 750 ಮೆಗಾವ್ಯಾಟ್ ಸೋಲಾರ್ ಸ್ಥಾವರ ನಿರ್ಮಾಣವಾಗಿದ್ದು ಇದನ್ನು ಏಷ್ಯಾದ ಅತಿದೊಡ್ಡ ಘಟಕವೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಹಾಗಾದರೆ, ಪಾವಗಡದಲ್ಲಿರುವ 2000 ಮೆಗಾವ್ಯಾಟ್ ಘಟಕ ಏನು ಎಂದು ಪ್ರಶ್ನಿಸಿದ್ದಾರೆ.
ಮೂರು ವರ್ಷದೊಳಗೆ ಕಾಂಗ್ರೆಸ್ ಸರ್ಕಾರ ಪಾವಗಡದಲ್ಲಿ ಸೋಲಾರ್ ಸ್ಥಾವರ ಸ್ಥಾಪಿಸಿದ್ದು 2018 ರಿಂದ ಕಾರ್ಯನಿರ್ವಹಿಸುತ್ತಿದೆ. 13,000 ಎಕರೆ ಜಮೀನನ್ನು ರೈತರಿಂದ ಗುತ್ತಿಗೆ ಪಡೆಯಲಾಗಿದ್ದು, ಬಾಡಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ 2000 ಮೆಗಾವ್ಯಾಟ್ ಪಾವಗಡ ಸೋಲಾರ್ ಪಾರ್ಕ್ ಬಿಟ್ಟು 750 ಮೆಗಾವ್ಯಾಟ್ ಸ್ಥಾವರವನ್ನು ಏಷ್ಯಾದ ಅತಿದೊಡ್ಡ ಘಟಕ ಎಂದು ಹೇಳಿಕೊಳ್ಳುತ್ತಿದ್ದು, ಈ ಕುರಿತಾಗಿ ಇಂಧನ ಸಚಿವರು ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.