ಶಿವಮೊಗ್ಗ: ಗಾಜನೂರು ತುಂಗಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ನಗರದ ವ್ಯಾಪ್ತಿಯಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು ಒಂದೇ ಮರದಲ್ಲಿ 10ಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ.
ಬೆಕ್ಕಿನಕಲ್ಮಠ ಸಮೀಪ ತುಂಗಾ ಸೇತುವೆ ಬಳಿ ತಡೆಗೋಡೆಯಲ್ಲಿ ಮರವೊಂದು ಇದ್ದು, ಇದರ ಮೇಲೆ 10ಕ್ಕೂ ಹೆಚ್ಚು ಹಾವುಗಳು ಕಂಡುಬಂದಿವೆ.
ಸ್ನೇಕ್ ಕಿರಣ್ ಅವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಿದ್ದರಿಂದ ಬಿಲದೊಳಗೆ ನೀರು ನುಗ್ಗಿ ಹಾವುಗಳು ಮೇಲೆ ಬಂದಿವೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ಸುರಕ್ಷಿತ ಸ್ಥಳವಾಗಿ ತಡೆಗೋಡೆಯ ಮರವನ್ನು ಆಶ್ರಯಿಸಿವೆ.
ತುಂಬಿದ ನದಿಯಲ್ಲಿ ಒಂದೇ ಮರದೊಳಗೆ 10ಕ್ಕೂ ಹೆಚ್ಚು ಹಾವುಗಳು ಕಂಡು ಬಂದಿದ್ದು ನೋಡುವವರ ಎದೆ ಜ್ಹಲ್ ಎನ್ನಿಸುವಂತಿತ್ತು. ಸ್ನೇಕ್ ಕಿರಣ್ ಸಾಹಸ ಮಾಡಿ ಹಾವುಗಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.