ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಕೋಡಿಮನೆ ಗ್ರಾಮದ ಬಳಿ ಹಳ್ಳಕ್ಕೆ ಕಾರ್ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಓರ್ವ ಯುವತಿ, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮಳೆ ಹಿನ್ನಲೆ ರಸ್ತೆ ತಿರುವು ಕಾಣದೇ ಹಳ್ಳಕ್ಕೆ ಕಾರ್ ಉರುಳಿ ಬಿದ್ದಿದೆ. ಉಂಚಳ್ಳಿ ಜಲಪಾತತಕ್ಕೆ ಭೇಟಿ ನೀಡಿ ಹಿಂತಿರುಗುವಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತರು ಧಾರವಾಡ ಜಿಲ್ಲೆ ಹುಬ್ಬಳ್ಳಿ ಮೂಲದವರು ಎಂದು ಹೇಳಲಾಗಿದೆ. ಹಳ್ಳದ ನೀರಿನಲ್ಲಿ 300 ಮೀಟರ್ ವರೆಗೂ ಕಾರ್ ತೇಲಿ ಹೋಗಿದ್ದು, ಹಳ್ಳದಲ್ಲಿ ಕಾರ್ ಕಂಡು ಬಂದಿದ್ದನ್ನು ಗಮನಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿದ್ಧಾಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನ ಭಾರೀ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಕೋಡಿಮನೆ ಸೇತುವೆಯಿಂದ ಕಾರ್ ನೀರಿಗೆ ಬಿದ್ದು 300 ಮೀಟರ್ ವರೆಗೂ ಕೊಚ್ಚಿ ಹೋಗಿದ್ದರಿಂದ ಯಾರಿಗೂ ಗೊತ್ತಾಗಿಲ್ಲ. ಗುರುವಾರ ಮಧ್ಯಾಹ್ನ ಕಾರ್ ಕಂಡ ಜನ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.