ಶಿವಮೊಗ್ಗ: ಕೊರೊನಾ ಲಾಕ್ ಡೌನ್ ಕಾರಣಕ್ಕಾಗಿ ವಿದ್ಯಾರ್ಥಿಗಳ ಪರೀಕ್ಷೆ, ಹುದ್ದೆಗಳ ನೇಮಕಾತಿ ಸೇರಿದಂತೆ ಹಲವು ಪ್ರಕ್ರಿಯೆಗಳು ಮುಂದೂಡಿಕೆಯಾಗಿದ್ದವು. ಇದೀಗ ಲಾಕ್ ಡೌನ್ ಸಡಿಲಿಕೆ ಬಳಿಕ ಈ ಪ್ರಕ್ರಿಯೆಗಳು ಮತ್ತೆ ಆರಂಭವಾಗುತ್ತಿವೆ.
2020 – 21 ನೇ ಸಾಲಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿ ಕುರಿತಂತೆ ಮಹತ್ವದ ಮಾಹಿತಿ ಇಲ್ಲಿದೆ. ಅರ್ಜಿ ಸಲ್ಲಿಕೆಗೆ ಹಾಗೂ ಶುಲ್ಕ ಪಾವತಿ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ.
ಆರ್.ಎಸ್.ಐ.(ಸಿಎಆರ್/ಡಿಎಆರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 16 ಕೊನೆ ದಿನವಾಗಿದ್ದು, ಶುಲ್ಕ ಪಾವತಿಗೆ ಜುಲೈ 18 ಕೊನೆಯ ದಿನವಾಗಿರುತ್ತದೆ. ಕೆಎಸ್ಆರ್ಪಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಗೆ ಜುಲೈ 21 ಕೊನೆಯ ದಿನವಾಗಿರುತ್ತದೆ.
ಎಸ್ಐ (ಕೆಎಸ್ಐಎಸ್ಎಫ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ ಹಾಗೂ ಶುಲ್ಕ ಪಾವತಿಗೆ ಜುಲೈ 21 ಕೊನೆಯ ದಿನವಾಗಿರುತ್ತದೆ. ಪಿಎಸ್ಐ (ವೈರ್ಲೆಸ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 18 ಹಾಗೂ ಶುಲ್ಕ ಪಾವತಿಗೆ ಜುಲೈ 21 ಕೊನೆಯ ದಿನವಾಗಿರುತ್ತದೆ.