ಬೆಳಗಾವಿ: ರಾಜ್ಯದಲ್ಲಿ ಕ್ರೋರಿ ಕೊರೊನಾ ಅಟ್ಟಹಾಸದ ನಡುವೆ ಇದೀಗ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಎಂಬ ಶಿಲೀಂದ್ರ ಸೋಂಕು ಕೊರೊನಾದಿಂದ ಗುಣಮುಖರಾಗುತ್ತಿರುವವರನ್ನು ಬಲಿ ಪಡೆಯುತ್ತಿದೆ. ಕುಂದಾನಗರಿ ಬೆಳಗಾವಿಯಲ್ಲಿ ಫಂಗಸ್ ದಾಳಿಗೆ ಜಿಲ್ಲೆಯ ಜನತೆ ನಲುಗುತ್ತಿದ್ದಾರೆ.
ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾದಿಂದ ಗುಣಮುಖರಾಗುತ್ತಿರುವ 9 ಜನರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಗೋಕಾಕ್ ಹಾಗೂ ಅಥಣಿ ತಾಲೂಕಿನಲ್ಲಿ ಇಬ್ಬರು ವೈಟ್ ಫಂಗಸ್ ಗೆ ಬಲಿಯಾಗಿದ್ದಾರೆ ಎಂದು ಡಿ ಹೆಚ್ ಒ ಡಾ.ಶಶಿಕಾಂತ ಮುನ್ಯಾಳ ತಿಳಿಸಿದ್ದಾರೆ.
ಸೋಂಕಿತರಿಗೆ ರೆಮ್ ಡಿಸಿವಿರ್ ಹಂಚಿಕೆ; ಸರ್ಕಾರದಿಂದಲೇ ಬರಲಿದೆ SMS
ವಾತಾವರಣದಲ್ಲಿ ಬ್ಲ್ಯಾಕ್ ಹಾಗೂ ವೈಟ್ ಎರಡೂ ರೀತಿಯ ಫಂಗಸ್ ಗಳಿವೆ. ಶೇ.60-70ರಷ್ಟು ಬ್ಲ್ಯಾಕ್ ಫಂಗಸ್ ಇದ್ದರೆ, ಶೇ.30-40ರಷ್ಟು ವೈಟ್ ಫಂಗಸ್ ಇದೆ. ಬೈಯಾಕ್ಸಿ ಮತ್ತು ಪೋಟ್ಯಾಶಿಯಂ ಹೈಡ್ರಾಕ್ಸೈಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಫಂಗಸ್ ಎಂದು ಗುರುತಿಸಲಾಗುತ್ತದೆ. ಕೊರೊನಾ ಸೋಂಕಿತರಿಗೆ ನೀಡಲಾಗುವ ಆಕ್ಸಿಜನ್ ಪೈಪ್ ಲೈನ್ 48 ಗಂಟೆಗಳಲ್ಲಿ ಬದಲಿಸಬೇಕು. ಇದರಲ್ಲಿ ಅಸಮರ್ಪಕ ನೀರಿನ ಬಳಕೆಯಿಂದಾಗಿ ಹಾಗೂ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಶುಗರ್ ಇರುವ ಸೋಂಕಿತರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ ಎಂದು ವಿವರಿಸಿದ್ದಾರೆ.