ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ಸ್ ಫ್ಯಾಕ್ಟರಿಯಾಗಿ ಪರಿವರ್ತನೆಯಾಗುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಈವರೆಗೆ ಡ್ರಗ್ ಪೆಡ್ಲರ್ ಗಳನ್ನು, ಡ್ರಗ್ಸ್ ಸೇವಿಸುತ್ತಿರುವವರನ್ನು ಬಂಧಿಸುತ್ತಿದ್ದ ಪೊಲೀಸರು ಇದೀಗ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯೊಂದಕ್ಕೆ ದಾಳಿ ನಡೆಸಿದ್ದು 10 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೈಜಿರೀಯನ್ ಪ್ರಜೆ ಜಾನ್ ಎಂಬಾತ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ, ನಗರದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಲ್ಲಿ ಮನೆಯನ್ನೇ ಡ್ರಗ್ಸ್ ಫ್ಯಾಕ್ಟರಿ ಮಾಡಿಕೊಂಡಿರುವ ಭೂಪನನ್ನು ನೋಡಿ ಶಾಕ್ ಆಗಿದ್ದಾರೆ.
ಅಕ್ಟೋಬರ್ 14 ರಂದು ‘ಶ್ರೀಕೃಷ್ಣ@gmail.com’ ರಿಲೀಸ್
5 ಕೆಮಿಕಲ್ಸ್ ಗಳನ್ನು ಬಳಸಿ ಆರೋಪಿ ಜಾನ್ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ, ಅದನ್ನು ಪ್ಯಾಕಿಂಗ್ ಮಾಡಿ ಸರಬರಾಜು ಮಾಡುತ್ತಿದ್ದ. ವಿದ್ಯಾರ್ಥಿ ಎಂದು ಹೇಳಿಕೊಂಡು ಕಳೆದ ಎರಡು ತಿಂಗಳ ಹಿಂದಷ್ಟೇ ಮನೆ ಬಾಡಿಗೆ ಪಡೆದುಕೊಂಡಿದ್ದ ಎನ್ನಲಾಗಿದೆ.
ಇದೀಗ ನೈಜಿರಿಯಾ ಮೂಲದ ಜಾನ್ ನನ್ನು ಬಂಧಿಸಿರುವ ಪೊಲೀಸರು ಆತನ ಮನೆಯಲ್ಲಿದ್ದ 10 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.