alex Certify ಶಾಕಿಂಗ್​: ಮೈಸೂರಿನಲ್ಲಿಯೂ ಪತ್ತೆಯಾಯ್ತು ಮಾರಕ ಬ್ಲಾಕ್​ ಫಂಗಸ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಮೈಸೂರಿನಲ್ಲಿಯೂ ಪತ್ತೆಯಾಯ್ತು ಮಾರಕ ಬ್ಲಾಕ್​ ಫಂಗಸ್​….!

ಕೊರೊನಾದಿಂದ ಗುಣಮುಖರಾದವರಿಗೆ ಕಾಣಿಸಿಕೊಳ್ಳುತ್ತಿರುವ ಮತ್ತೊಂದು ಮಾರಕ ಕಾಯಿಲೆ ಬ್ಲ್ಯಾಕ್​ ಫಂಗಸ್​ ಇದೀಗ ಮೈಸೂರಿಗೆ ಕಾಲಿಟ್ಟಿದೆ.

ಮೈಸೂರಿನಲ್ಲಿ ಇಬ್ಬರಿಗೆ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಮಾಹಿತಿ ನೀಡಿದ್ದಾರೆ.

ಕೊರೊನಾದಿಂದಾಗಿ ಕಳೆದ 14 ದಿನಗಳಿಂದ ಐಸಿಯುವಿನಲ್ಲಿದ್ದ ಇಬ್ಬರಿಗೆ ಬ್ಲ್ಯಾಕ್​ ಫಂಗಸ್​ ಸೋಂಕು ತಗುಲಿದೆ. ಸೋಂಕಿತರಿಗೆ ವೈದ್ಯರು ಸೂಕ್ತ ಚಿಕಿತ್ಸೆಯನ್ನ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಯಾರೂ ಕಪ್ಪು ಶಿಲೀಂಧ್ರ ಸೋಂಕಿನಿಂದ ಸಾವನ್ನಪ್ಪಿಲ್ಲ. ಯಾರೂ ಆತಂಕ ಪಡುವ ಅವಶ್ಯಕತೆ ಬೇಡ ಎಂದು ಹೇಳಿದ್ರು.

ಬ್ಲ್ಯಾಕ್​ ಫಂಗಸ್​ ಅನ್ನೋದು ಒಂದು ಮಾರಣಾಂತಿಕ ಸೋಂಕಾಗಿದ್ದು ಕೊರೊನಾದಿಂದ ಗುಣಮುಖರಾದ ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದೆ. ಕೊರೊನಾ 2ನೇ ಅಲೆಯಲ್ಲಿ ಸೋಂಕಿತರಿಗೆ ಈ ಹೊಸ ಸಂಕಷ್ಟ ಎದುರಾಗಿದೆ. ಮ್ಯುಕೋರ್ಮೈಕೋಸಿಸ್ ಜಾತಿಯ ಶಿಲೀಂಧ್ರ ಈ ಸೋಂಕನ್ನ ಹರಡುತ್ತದೆ. ಈ ಸೋಂಕಿನಿಂದ ರೋಗಿಗಳು ತಮ್ಮ ದೃಷ್ಟಿಯನ್ನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...