ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಇಕ್ಕೇರಿ ಸಮೀಪದ ಕಸಕಸೆಕೊಡ್ಲುವಿನಲ್ಲಿ ತಾಯಿ, ಮಗನನ್ನು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿ ಭರತ್ ಗೌಡ ನನ್ನು ಬಂಧಿಸಿದ್ದಾರೆ. ಇಂದು ಸ್ಥಳ ಮಹಜರುಗೆ ತೆರಳಿದ್ದ ವೇಳೆಯಲ್ಲಿ ಆರೋಪಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಫೈರಿಂಗ್ ಮಾಡಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಕಳೆದ ವಾರ ಬಂಗಾರಮ್ಮ ಮತ್ತು ಅವರ ಪುತ್ರ ಪ್ರವೀಣ್ ಅವರನ್ನು ಭರತ್ ಕೊಲೆ ಮಾಡಿ ಪರಾರಿಯಾಗಿದ್ದ. ಇಂದು ಸ್ಥಳ ಮಹಜರು ವೇಳೆಯಲ್ಲಿ ಕಾನ್ ಸ್ಟೇಬಲ್ ಚಂದ್ರನಾಯಕ್ ಅವರ ಮೇಲೆ ಹಲ್ಲೆ ಮಾಡಿ ಭರತ್ ಪರಾರಿಯಾಗಲು ಯತ್ನಿಸಿದ್ದಾನೆ ಡಿಸಿಬಿ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಫೈರಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರೀತಿಸಿದ ವಿಚಾವೇ ಕೊಲೆಗೆ ಕಾರಣವೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.