alex Certify ತವರು ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಭರ್ಜರಿ ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತವರು ಕ್ಷೇತ್ರಕ್ಕೆ ಸಿಎಂ ಯಡಿಯೂರಪ್ಪ ಭರ್ಜರಿ ಕೊಡುಗೆ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು ಅಕ್ಟೋಬರ್ 19 ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶಿಕಾರಿಪುರ ತಾಲೂಕಿನ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಪ್ರವಾಸೋದ್ಯಮ ಮತ್ತು ಕನ್ನಡ, ಸಂಸ್ಕೃತಿ ಮತ್ತು ಯುವಜನ ಸಬಲೀಕರಣ, ಕ್ರೀಡಾ ಸಚಿವ ಸಿ.ಟಿ.ರವಿ, ಪಶುಸಂಗೋಪನಾ, ಹಜ್ಹ್ ಮತ್ತು ವಕ್ಫ್ ಇಲಾಖೆ ಸಚಿವ ಪ್ರಭು ಚವಾಣ್ ಪೌರಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಶಿವಕುಮಾರ್ ಕೆ.ಬಿ., ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ ಉಪಸ್ಥಿತರಿರುವರು.

ಶಂಕುಸ್ಥಾಪನೆಯಾಗಲಿರುವ ಕಾಮಗಾರಿಗಳು:

ಕಸಬಾ(ಕಲ್ಲುವಡ್ಡುಹಳ್ಳ) ಏತ ನೀರಾವರಿ ಯೋಜನೆ –ಅಂದಾಜು ವೆಚ್ಚ 125.17 ಕೋಟಿ ರೂ.

ಶಿವಶರಣೆ ಅಕ್ಕಮಹಾದೇವಿ ಜನ್ಮ ಸ್ಥಳದ ಸಮಗ್ರ ಅಭಿವೃದ್ಧಿ ಕಾಮಗಾರಿ – ಅಂ.ವೆ.  14.80 ಕೋಟಿ ರೂ.

ಶಿಕಾರಿಪುರ ತಾ. ಸನ್ಯಾಸಿಕೊಪ್ಪ ಏತ ನೀರಾವರಿ ಯೋಜನೆ ಮುಖ್ಯ ನಾಲೆಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ಕವರ್ ಡಕ್ಟ್ ನಿರ್ಮಾಣ ಕಾಮಗಾರಿ– ಅಂ.ವೆ. 16.41 ಕೋಟಿ ರೂ.

ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಸಮಗ್ರ ಅಭಿವೃದ್ಧಿ ಕಾಮಗಾರಿ- ಅಂ.ವೆ. 5 ಕೋಟಿ ರೂ.

ಶಿವಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಸಮಗ್ರ ಅಭಿವೃದ್ಧಿ ಕಾಮಗಾರಿ- ಅಂ.ವೆ. 3 ಕೋಟಿ ರೂ.

110/11 ಕೆ.ವಿ. ವಿದ್ಯುತ್ ಉಪಕೇಂದ್ರ ಭಕ್ತನಕೊಪ್ಪ -ಅಂ.ವೆ. 8.33 ಕೋಟಿ. ರೂ.

110/11 ಕೆ.ವಿ. ವಿದ್ಯುತ್ ಉಪಕೇಂದ್ರ ಅಂಬಾರಕೊಪ್ಪ – ಅಂ.ವೆ. 9.10 ಕೋಟಿ ರೂ.

ಶಿಕಾರಿಪುರ ತಾ. ಎಸ್.ಹೆಚ್.-57 ಹತ್ತಿರ ಭದ್ರಾಪುರದಿಂದ ಗಾಮ, ಈಸೂರು, ಹುಣಸೆಕೊಪ್ಪ ಮುಖಾಂತರ ಮಾಡ್ರಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. 6.95 ಕೋಟಿ ರೂ.,

ಶಿಕಾರಿಪುರ ತಾ. ಕೊರಟಿಕೆರೆ ಎಂ.ಡಿ.ಆರ್..ಯಿಂದ ಚನ್ನಬಸವೇಶ್ವರ ದೇವಸ್ಥಾನ, ಹೊಸಮುತ್ತಗಿ ಮುಖಾಂತರ ಹಕ್ಕಲಿಕೊಪ್ಪವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. 2.7 ಕೋಟಿ ರೂ.,

ಶಿಕಾರಿಪುರ ತಾ. ಎಸ್.ಹೆಚ್. ಹತ್ತಿರ ಹುಲುಗಿನಕೊಪ್ಪದಿಂದ ಮುತ್ತಗಿ, ಬಿದರಕೊಪ್ಪ, ಸಾದಾಪುರ ಮುಖಾಂತರ ಕಡೇನಂದಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. 5.91 ಕೋಟಿ ರೂ.,

ಶಿಕಾರಿಪುರ ತಾ. ಬಿಳಕಿ ಎಂ.ಡಿ.ಆರ್.ಯಿಂದ ಕಾಡೆತ್ತಿನಹಳ್ಳಿ ಮುಖಾಂತರ ಸಿಡ್ಡಿಹಳ್ಳಿವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ- ಅಂ.ವೆ. 4.6 ಕೋಟಿ ರೂ.,

ಶಿರಾಳಕೊಪ್ಪ ಪಟ್ಟಣ ಪಂಚಾಯತಿಯ ಕುರಿ-ಕೋಳಿ ಮಳಿಗೆಗಳ ಸಂಕೀರ್ಣದ ಕಾಮಗಾರಿ- ಅಂ.ವೆ. 1.05 ಕೋಟಿ ರೂ.

ಉದ್ಘಾಟನೆಯಾಗಲಿರುವ ಕಾಮಗಾರಿಗಳು:

ತೊಗರ್ಸಿ ಪಶು ಚಿಕಿತ್ಸಾಲಯ ಕಟ್ಟಡ, ಬಿಳಕಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಕಟ್ಟಡ, ಶಿಕಾರಿಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ, ಶಿಕಾರಿಪುರ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಶಿರಾಳಕೊಪ್ಪ ಟೌನ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಯ ಬಳ್ಳಿಗಾವಿಯಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದಲ್ಲಿ ಅಳವಡಿಸಿರುವ ಕಸ ಸಂಸ್ಕರಣ ಯಂತ್ರ ಮತ್ತು ಬೇಲಿಂಗ್ ಯಂತ್ರದ ಉದ್ಘಾಟನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...