ಬೆಂಗಳೂರು: ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22 ರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಸಂಪೂರ್ಣ ಲಾಕ್ಡೌನ್ ಆಗಲಿವೆ.
ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧಿ, ಆಂಬುಲೆನ್ಸ್ ಸೇವೆ, ಪೆಟ್ರೋಲ್ ಬಂಕ್, ದಿನಸಿ, ಹಾಲು, ತರಕಾರಿ ಮೊದಲಾದವುಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಇರುತ್ತದೆ. ಆಟೋ-ಟ್ಯಾಕ್ಸಿ, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸಂಚಾರ ಇರುವುದಿಲ್ಲ. ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್, ಮಾಲ್ ಗಳು ಬಂದ್ ಆಗಲಿವೆ.