ರಾಯಚೂರು: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನೀರು ಪಾಲಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ರಾಯಚೂರು ತಾಲೂಕಿನ ಕುರುವಕಲ್ ಗ್ರಾಮದ ನಿವಾಸಿಗಳು ತೆಲಂಗಾಣದ ಮಕ್ತಲ್ ಗೆ ತೆರಳಿ ಹಿಂದಿರುಗುವಾಗ 8 ವರ್ಷದ ಬಾಲಕಿ ಸೇರಿ ಮೂವರು ಮಹಿಳೆಯರು ನೀರುಪಾಲಾಗಿದ್ದಾರೆ. ಮಕ್ತಲ್ ಠಾಣೆ ಪೊಲೀಸರಿಂದ ಶೋಧ ಕಾರ್ಯಕೈಗೊಳ್ಳಲಾಗಿದ್ದು, ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಠಾಣೆ ಪೊಲೀಸರು ಸಾಥ್ ನೀಡಿದ್ದಾರೆ.
ತೆಪ್ಪದಲ್ಲಿ ಕೃಷ್ಣಾ ನದಿ ದಾಟುತ್ತಿದ್ದ 13 ಜನರ ಪೈಕಿ ನಾಲ್ವರು ನೀರು ಪಾಲಾಗಿದ್ದು, ಉಳಿದವರು ಪಾರಾಗಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರೆಸಲಾಗಿದೆ.