ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೊರೆಯುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಅತಿ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಪಾಠ ಮಾಡಬಹುದಾಗಿದೆ. ಗರಿಷ್ಠ 20 ಮಕ್ಕಳಿರುವ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠಪ್ರವಚನ ಮಾಡಬಹುದು ಎಂದು ಹೇಳಲಾಗಿದೆ.
ದಿನದಲ್ಲಿ ಒಂದು ಗಂಟೆ ಅವಧಿಯ 2 ತರಗತಿ ನಡೆಸಬಹುದೆಂದು ವರದಿ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಪ್ರೊ. ಶ್ರೀಧರ್ ನೇತೃತ್ವದ ಸಮಿತಿ ಗ್ರಾಮೀಣ ಶಾಲೆ ತೆರೆಯಲು ಶಿಫಾರಸು ಮಾಡಿದೆ ಎನ್ನಲಾಗಿದೆ.
ಗ್ರಾಮೀಣ ಭಾಗದಲ್ಲಿ ಕೆಂಪು, ಕಿತ್ತಳೆ, ಹಸಿರು ಭಾಗಗಳನ್ನಾಗಿ ವಿಂಗಡಿಸಿ ಅಗತ್ಯ ಕ್ರಮ ಕೈಗೊಂಡು ಶಾಲೆಗಳನ್ನು ತೆರೆಯಲು ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಲಾಗಿದೆ.