ಬೆಂಗಳೂರು: ಹಂತ ಹಂತವಾಗಿ ಶಾಲಾ – ಕಾಲೇಜುಗಳನ್ನು ತೆರೆಯುವಂತೆ ಸರ್ಕಾರಕ್ಕೆ ಶಿಕ್ಷಣ ಸಲಹೆಗಾರ ಎಂ.ಆರ್. ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಕೊರೋನಾ ಕಾರಣದಿಂದಾಗಿ ಶಾಲಾ-ಕಾಲೇಜುಗಳು ಪುನಾರಂಭವಾಗಿಲ್ಲ. ಸುರಕ್ಷತೆ ಕ್ರಮಕೈಗೊಂಡು ರಾಜ್ಯದಲ್ಲಿ ಹಂತ ಹಂತವಾಗಿ ಶಾಲಾ ಕಾಲೇಜು ತೆರೆಯಲು ಅನುಮತಿ ನೀಡುವಂತೆ ದೊರೆಸ್ವಾಮಿ ಸಲಹೆ ನೀಡಿದ್ದಾರೆ.
ಜನರಲ್ಲಿ ನಿಧಾನವಾಗಿ ಕೊರೋನಾ ಕುರಿತಾದ ಭಯ ಕಡಿಮೆಯಾಗತೊಡಗಿದೆ. ಕೊರೋನಾ ಬಗ್ಗೆ ಜಾಗೃತಿ ಹೊಂದಿರುವವರಿಗೆ ತರಗತಿಗಳನ್ನು ಆರಂಭಿಸಬೇಕು. ಆರಂಭಿಕ ಹಂತದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು. ನಂತರ ಪದವಿ, ಪದವಿ ಪೂರ್ವ ಕಾಲೇಜುಗಳನ್ನು ತೆರೆಯಬಹುದು. ಬಳಿಕ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.