
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾಲೆಯೊಂದರಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಾಗಾಈದಲಾಯಿ ಗ್ರಾಮದಲ್ಲಿ ಕೆರೆಯ ಕೋಡಿ ಒಡೆದ ಪರಿಣಾಮ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಸುರಕ್ಷಿತ ಸ್ಥಳಕ್ಕೆ ತೆರಳುವ ಸಂದರ್ಭದಲ್ಲಿ ತುಂಬು ಗರ್ಭಿಣಿಯಾಗಿದ್ದ ಗೀತಾ ರಾಣಿ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಗೀತಾ ರಾಣಿ ಅವರ ತಂದೆಯ ಅಜ್ಜಿ ಶತಾಯುಷಿಯಾಗಿರುವ ನಾಗಮ್ಮ ಅವರು ಸಹಜ ಹೆರಿಗೆ ಮಾಡಿಸಿದ್ದಾರೆ. ಗಂಡನ ಮನೆ ಶ್ರೀಗಿರಿಪೇಟೆಯಿಂದ ಹೆರಿಗೆಗಾಗಿ ತವರು ಮನೆಗೆ ಆಗಮಿಸಿದ್ದರು. ಹೆರಿಗೆ ನಂತರ ತಾಯಿ, ಮಗುವು ಸುರಕ್ಷಿತವಾಗಿದ್ದು ಅವರನ್ನು ಸಾಲೇಬೀರನಹಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.