ಬೆಂಗಳೂರು: ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಕಾರಣ ವೇತನ ಕಡಿತದ ಆತಂಕದಲ್ಲಿದ್ದ ಗುತ್ತಿಗೆ ನೌಕರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸರ್ಕಾರದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ವೇತನವನ್ನು ಕಡಿತ ಮಾಡದೇ ಸಂಪೂರ್ಣ ವೇತನ ಪಾವತಿಸುವಂತೆ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳು, ನಿಗಮ-ಮಂಡಳಿಗಳಿಗೆ ಈ ಕುರಿತಾಗಿ ಸೂಚನೆ ನೀಡಲಾಗಿದೆ.
ಲಾಕ್ಡೌನ್ ಜಾರಿಯಾಗಿ ಕೆಲಸಕ್ಕೆ ಗೈರು ಹಾಜರಾಗಿದ್ದರು ಕೂಡ ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ ಕಡಿತ ಮಾಡಬಾರದು. ಸರ್ಕಾರಿ, ಅರೆಸರ್ಕಾರಿ, ನಿಗಮ – ಮಂಡಳಿಗಳು ಮತ್ತು ಸರ್ಕಾರದ ಉದ್ಯಮಗಳ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಕೇಂದ್ರ ಸರ್ಕಾರದ ಆದೇಶದಂತೆ ಸಂಪೂರ್ಣ ವೇತನ ನೀಡಬೇಕೆಂದು ತಿಳಿಸಲಾಗಿದೆ.