ಬೆಂಗಳೂರು: ಜನಸೇವಕ ವ್ಯಾಪ್ತಿಗೆ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ, ಮತದಾರರ ನೋಂದಣಿ ಸೇವೆಗಳನ್ನು ತರಲಾಗುವುದು.
ಸಕಾಲ ಜನಸೇವಕ ಯೋಜನೆಯಡಿ ಎಪಿಎಲ್ ಪಡಿತರ ಚೀಟಿ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ನೋಂದಣಿ, ಆಧಾರ್ ನೋಂದಣಿ ಸೇವೆ ನೀಡಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಶೀಘ್ರವೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು.
ಶಿಕ್ಷಣ, ಸಕಾಲ ಯೋಜನೆ ಸಚಿವ ಸುರೇಶ್ ಕುಮಾರ್ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ಸಕಾಲ ಜನಸೇವಕ ಯೋಜನೆಯಡಿ ಆದಾಯ, ಜಾತಿ ಪ್ರಮಾಣ ಪತ್ರ, ಪಿಂಚಣಿ ಮೊದಲಾದ 50 ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಆಧಾರ್ ನೋಂದಣಿ, ಎಪಿಎಲ್ ಪಡಿತರ ಕಾರ್ಡ್, ಮತದಾರರ ನೊಂದಣಿ ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.