ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕ ರಾಜ್ಯಕ್ಕೆ ಬೆಳಕು ನೀಡುವ ಕಾರ್ಯದಲ್ಲಿದ್ದರೂ ಸಹ ಸ್ಥಳೀಯರಿಗೆ ಇಲ್ಲಿ ಉದ್ಯೋಗಾವಕಾಶ ಸಿಗುತ್ತಿಲ್ಲ ಎಂಬ ಕೊರಗು ಬಹುಕಾಲದಿಂದ ಕಾಡುತ್ತಿತ್ತು. ಕರ್ನಾಟಕ ವಿದ್ಯುತ್ ನಿಗಮ ಇದಕ್ಕೆ ಅಂತ್ಯ ಹಾಡಲು ಈಗ ಮುಂದಾಗಿದೆ.
ಶಾಖೋತ್ಪನ್ನ ವಿದ್ಯುತ್ ಘಟಕದ ವಿವಿಧ ವಿಭಾಗಗಳಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇದೀಗ ತಾಂತ್ರಿಕ ವಿಭಾಗದ ನೂರು ಹುದ್ದೆಗಳಿಗೆ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಅರ್ಹರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕರ್ನಾಟಕ ವಿದ್ಯುತ್ ನಿಗಮ ಕಾರ್ಯೋನ್ಮುಖವಾಗಿದೆ.
ಶಾಕ್ ಆಗುವಂತಿದೆ ಭಾರತೀಯರ ʼಸ್ಮಾರ್ಟ್ ಫೋನ್ʼ ಗೀಳು…!
ಈ ಕುರಿತಂತೆ ಪತ್ರ ಬರೆಯಲಾಗಿದ್ದು, ಶಾಖೋತ್ಪನ್ನ ಘಟಕದ ತಾಂತ್ರಿಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಮುನ್ನ ಸ್ಥಳೀಯರಿಗೆ ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ಕೋರ್ಸ್ ಆರಂಭಿಸಿ ತರಬೇತಿ ನೀಡುವಂತೆ ಕೋರಲಾಗಿದೆ. ಇದಕ್ಕೆ ವಿಶ್ವವಿದ್ಯಾನಿಲಯದಿಂದಲೂ ಸಹ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.