ಬೆಂಗಳೂರು: ಆರ್ಟಿಇ ಸೀಟುಗಳನ್ನು ಕೇಳುವವರಿಲ್ಲದಂತಾಗಿದೆ. ಸರ್ಕಾರಿ ಶಾಲೆಗಳು ಇಲ್ಲದ ಕಡೆ ಆರ್ಟಿಇ ಸೀಟು ನೀಡಲು ರಾಜ್ಯ ಸರ್ಕಾರ ನಿಯಮಾವಳಿ ಬದಲಿಸಿದ ನಂತರ ರಾಜ್ಯದಲ್ಲಿ ಆರ್ಟಿಇ ಸೀಟುಗಳಿಗೆ ಬೇಡಿಕೆ ಇಲ್ಲದಂತಾಗಿದೆ.
ಇದುವರೆಗೆ 11,466 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಹಿಂದೆ ಆರ್ಟಿಇ ಸೀಟುಗಳಿಗೆ ಮುಗಿಬೀಳುತ್ತಿದ್ದ ಪೋಷಕರು ಈಗ ಆರ್ಟಿಇ ಪ್ರವೇಶ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಈ ಹಿಂದೆ ಆರ್ಟಿಇ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇತ್ತು. ನಿಯಮಾವಳಿ ಬದಲಿಸಿದ ನಂತರದಲ್ಲಿ ಬೇಡಿಕೆ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಸದ್ಯಕ್ಕೆ ಶಾಲೆಗಳು ಆರಂಭವಾಗದಿದ್ದರೂ ಆರ್ಟಿಇ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಕೊರೋನಾ ಕಾರಣದಿಂದ ಅರ್ಜಿ ಸಲ್ಲಿಕೆ ಕಡಿಮೆಯಾಗಿರಬಹುದೆಂದು ಹೇಳಲಾಗಿದೆ.