ಸಾಮಾಜಿಕ ಜಾಲತಾಣದಲ್ಲಿ ಪವರ್ಫುಲ್ ಪೋಸ್ಟ್ ಒಂದನ್ನು ಮಾಡಿರುವ ವಿಪ್ರೋ ಚೇರ್ಮನ್ ರಿಶದ್ ಪ್ರೇಂ ಜೀ, ತಮ್ಮ ತಂದೆ ಅಜೀಮ್ ಪ್ರೇಂ ಜೀ ಅವರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವಾರಗಳಿಂದ ತಮ್ಮ ಕುಟುಂಬದ ಹಳೆಯ ಚಿತ್ರಗಳನ್ನು ತಮ್ಮ ಟೈಂಲೈನ್ನಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ರಿಶದ್, ಅನೇಕ ಸವಿನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ.
“ನನ್ನ ತಂದೆ, ಅಜೀಂ ಪ್ರೇಂ ಜೀ ಸಣ್ಣದೊಂದು ವನಸ್ಪತಿ ಉದ್ಯಮವನ್ನು ತಮ್ಮ 21ನೇ ವಯಸ್ಸಿನಲ್ಲಿ ಹೆಗಲ ಮೇಲೆ ತೆಗೆದುಕೊಂಡು, ಮುಂದಿನ 53 ವರ್ಷಗಳಲ್ಲಿ ವೈವಿಧ್ಯಮಯ ಉದ್ಯಮ ಸಾಮ್ರಾಜ್ಯ ಕಟ್ಟಿದ್ದಾರೆ. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ಅವರು ಒಂದು ಸ್ವಲ್ಪವೂ ಬದಲಾಗಿಲ್ಲ. ಯಾವಾಗಲೂ ಕಾಲುಗಳನ್ನು ನೆಲದ ಮೇಲೇ ಇಟ್ಟುಕೊಂಡು, ಸಮಚಿತ್ತವಾಗಿ ಇರುವುದನ್ನು ನಾನು ಅವರಿಂದ ಕಲಿತಿದ್ದೇನೆ” ಎಂದು ರಿಶದ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.