ಕೋಲಾರ: ಕೊರೋನಾ ಕೋವಿಡ್ 19 ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಜೂನ್ ಮಾಹೆಯ ಅನ್ನಭಾಗ್ಯ ಯೋಜನೆ, ಪ್ರಧಾನ ಮಂತ್ರಿ ಗರೀಭ್ ಕಲ್ಯಾಣ ಮತ್ತು ಆತ್ಮ ನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಪಡಿತರವನ್ನು ವಿತರಿಸಲಾಗುವುದು.
ಅಂತ್ಯೋದಯ ಪಡಿತರ ಚೀಟಿಗೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿ ಮತ್ತು ಪ್ರತಿ ಕಾರ್ಡಿಗೆ 35 ಕೆ.ಜಿ ಅಕ್ಕಿ ಹಾಗೂ 2 ಕೆ.ಜಿ ತೊಗರಿಬೇಳೆ, ಆದ್ಯತಾ ಕುಟುಂಬ(ಬಿಪಿಎಲ್) ಪಡಿತರ ಚೀಟಿಗೆ ಉಚಿತವಾಗಿ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ, 2 ಕೆ.ಜಿ ತೊಗರಿಬೇಳೆ, 2 ಕೆ.ಜಿ ಗೋಧಿಯನ್ನು ವಿತರಿಸಲಾಗುವುದು.
ಅದ್ಯತೇತರ ಕುಟುಂಬ(ಎಪಿಎಲ್) ಪಡಿತರ ಚೀಟಿಗೆ ಪ್ರತಿ ಕೆ.ಜಿ ಅಕ್ಕಿಗೆ 15 ರೂನಂತೆ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ ಅಕ್ಕಿ, ಎರಡಕ್ಕೂ ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿ, ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಬಿ.ಪಿ.ಎಲ್ ಅರ್ಜಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ, ಎ.ಪಿ.ಎಲ್ ಅರ್ಜಿಗೆ ಪ್ರತಿ ಕೆ.ಜಿ ಗೆ 15 ರೂ. ನಂತೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.
ವಲಸೆ ಅಥವಾ ಪಡಿತರ ಚೀಟಿ ಪಡೆಯದೆ ಇರುವ ಪ್ರತಿ ಫಲಾನುಭವಿಗಳಿಗೆ (ಮೇ ಹಾಗೂ ಜೂನ್ ತಿಂಗಳಲ್ಲಿ ಮಾತ್ರ) ಉಚಿತವಾಗಿ ಮೇ ತಿಂಗಳಲ್ಲಿ ಅಕ್ಕಿ ಪಡೆಯದ ಫಲಾನುಭವಿಗೆ 10 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಕಡಲೆಕಾಳು (ಲಭ್ಯತೆ ಅನುಸಾರ), ಮೇ ತಿಂಗಳಲ್ಲಿ ಅಕ್ಕಿ ಪಡೆದಿರುವ ಫಲಾನುಭವಿಗೆ 5 ಕೆ.ಜಿ ಅಕ್ಕಿ ಮತ್ತು 2 ಕೆ.ಜಿ ಕಡಲೆಕಾಳು (ಲಭ್ಯತೆ ಅನುಸಾರ) ವಿತರಿಸಲಾಗುವುದು ಎಂದು ಜಿಲ್ಲಾದಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ.