alex Certify ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಈ‌ ನಿವೃತ್ತ ಇಂಜಿನಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ ಈ‌ ನಿವೃತ್ತ ಇಂಜಿನಿಯರ್

Retired Bengaluru Engineer Volunteers at Govt Hospital to Help With Covid Jab Process

ದೇಶವಾಸಿಗಳಿಗೆ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. ಇದಕ್ಕೆಂದೇ ನಿಗದಿ ಮಾಡಿರುವ ಆಸ್ಪತ್ರೆಗಳು ಹಾಗು ಆರೋಗ್ಯ ಸೇವಾ ಕೇಂದ್ರಗಳು ಭಾರೀ ಜನಜಂಗುಳಿಯನ್ನು ನೋಡುತ್ತಿವೆ.

ಬೆಂಗಳೂರಿನ ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ದೊಡ್ಡ ಸಂಖ್ಯೆಯ ಜನರು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲೆಂದು ನೆರೆಯುತ್ತಿದ್ದಾರೆ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಮೇಲೆ ಆಗುತ್ತಿರುವ ಹೊರೆಯನ್ನು ಕೊಂಚ ಇಳಿಸಲೆಂದು ಮುಂದಾಗಿರುವ 59 ವರ್ಷ ವಯಸ್ಸಿನ ಸತೀಶ್ ರಾವ್ ಹೆಸರಿನ ವ್ಯಕ್ತಿಯೊಬ್ಬರು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.

ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ ಸಂತೀಶ್ ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ನೆರೆಯುವ ಮಂದಿಗೆ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಅಗತ್ಯ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಎಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಇಂಜಿನಿಯರಿಂಗ್ ವೃತ್ತಿಯಿಂದ ನಿವೃತ್ತರಾಗಿರುವ‌ ಸತೀಶ್ ರಾವ್‌ ಅವರು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ಆಗಮಿಸಿ ಸಂಜೆ 4ರ ವರೆಗೂ ಅಲ್ಲೇ ಇದ್ದು ಲಸಿಕಾ ಕಾರ್ಯಕ್ರಮ ಸುಗಮವಾಗಿ ಸಾಗುವಂತೆ ನೆರವಾಗುತ್ತಿದ್ದಾರೆ. ರಾವ್ ಈ ಕೆಲಸವನ್ನು ಮಾರ್ಚ್ 2ರಿಂದಲೂ ಮಾಡಿಕೊಂಡೇ ಬರುತ್ತಿದ್ದಾರೆ.

ಈ ಹಿಂದೆ ಸಹ ಟೀಚ್ ಇಂಡಿಯಾದಂಥ ಪ್ರಾಜೆಕ್ಟ್‌ಗಳಲ್ಲಿ ಸ್ವಸಹಾಯಕರಾಗಿ ಕೆಲಸ ಮಾಡಿರುವ ರಾವ್‌ ಪ್ರಾಣಿದಯಾ ಸಂಘಟನೆಗಳಲ್ಲೂ ತಮ್ಮ ಪರೋಪಕಾರದ ಕೆಲಸ ಮಾಡಿದ್ದಾರೆ.

ಕೊರೋನಾ ವೈರಸ್‌ ಪಿಡುಗಿನ ವಿರುದ್ಧ ಹೋರಾಟದಲ್ಲಿ ಬಿಬಿಎಂಪಿಗೆ ನೆರವಾಗಲು ಸತೀಶ್ ಈಗ ಮುಂದಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...