ಬೆಂಗಳೂರು: ಸರ್ಕಾರಿ ಹುದ್ದೆಗಳ ಎ ಮತ್ತು ಬಿ ವೃಂದಗಳ ನೇಮಕಾತಿಯಲ್ಲಿ ವಿಶೇಷಚೇತನರಿಗೆ ಶೇಕಡ 4ರಷ್ಟು ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
ಸುಪ್ರೀಂಕೋರ್ಟ್ ಆಶಯ ಮತ್ತು ಕೇಂದ್ರ ಸರ್ಕಾರದ ಆಶಯ ಅನುಗುಣವಾಗಿ ರಾಜ್ಯ ಸರ್ಕಾರ ಶೇಕಡ 4ರಷ್ಟು ಮೀಸಲು ಹೆಚ್ಚಿಸಿದ್ದು ರಾಜ್ಯಪತ್ರದಲ್ಲಿ ಕರಡು ಪ್ರಕಟಿಸಲಾಗಿದೆ.
ಶೇಕಡ 3ರಿಂದ ಶೇಕಡ 4ಕ್ಕೆ ವಿಶೇಷ ಚೇತನರ ಮೀಸಲು ಪ್ರಮಾಣ ಹೆಚ್ಚಾಗಲಿದೆ. ಸಿ ಮತ್ತು ಡಿ ವೃಂದದಲ್ಲಿರುವ ಶೇಕಡ 5ರಷ್ಟು ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗಿದೆ.