ಬೆಂಗಳೂರು: ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ 73 ಕೊರೋನಾ ಸೋಂಕಿತರ ಚಿಕಿತ್ಸೆಗೆ ರೆಮ್ ಡೆಸಿವಿರ್ ಬಳಕೆ ಮಾಡಲಾಗಿದ್ದು ಐಸಿಯುನಿಂದ ಹೊರ ಬಂದ ರೋಗಿಗಳು ಚೇತರಿಸಿಕೊಂಡಿದ್ದಾರೆ.
ರೆಮ್ ಡೆಸಿವಿರ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, ರೋಗಿಗಳ ಜೀವ ಉಳಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.
ರೆಮ್ ಡೆಸಿವಿರ್, ಬ್ಲಡ್ ಥಿನ್ನರ್ ಮತ್ತು ಸ್ಟೆರಾಯ್ಡ್ ಗಳು ರೋಗಿಗಳ ಜೀವ ಉಳಿಸುವಲ್ಲಿ ಪರಿಣಾಮಕಾರಿಯಾಗಿವೆ. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರೆಮ್ ಡೆಸಿವಿರ್ ಬಳಕೆ ಮಾಡಲಾಗುತ್ತಿದೆ. ಐಸಿಯುನಲ್ಲಿದ್ದ ಸೋಂಕಿತರು ಸಾವಿನ ಸುಳಿಯಿಂದ ಹೊರಬರತೊಡಗಿದ್ದಾರೆ. ಎರಡು-ಮೂರು ವಾರಗಳಲ್ಲಿ ಗುಣಮುಖರಾಗುವವರ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗಿದೆ.