ಬೆಂಗಳೂರು : ನಟ ಶಿವರಾಜ್ ಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರ ನಿನ್ನೆ ತೆರೆಕಂಡಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಬೆಂಗಳೂರಿನಲ್ಲಿ ಘೋಸ್ಟ್ ಚಿತ್ರಕ್ಕೆ ಮಾರ್ನಿಂಗ್ ಶೋ ನೀಡದ ಪಿವಿಆರ್ ವಿರುದ್ಧ ನಟ ಶಿವರಾಜ್ ಕುಮಾರ್ ಗರಂ ಆಗಿದ್ದಾರೆ. ಪಿವಿಆರ್ ಏನು ಕರ್ನಾಟಕದಲ್ಲಿ ಇಲ್ವಾ..? ಪಿವಿಆರ್ ಕನ್ನಡಿಗರ ನೆಲದಲ್ಲಿ ಇರೋದಲ್ವಾ..?ಪಿವಿ ಆರ್ ಗೇನು ಕೊಂಬು ಇದ್ಯಾ ಎಂದು ನಟ ಶಿವಣ್ಣ ಗರಂ ಆಗಿದ್ದಾರೆ. ಪಿವಿಆರ್ ಮಾರ್ನಿಂಗ್ ಶೋ ನಲ್ಲಿ ಘೋಸ್ಟ್ ಚಿತ್ರ ಹಾಕದೇ ಪರಭಾಷೆಯ ಸಿನಿಮಾ ಪ್ರದರ್ಶಿಸಿದ್ದಕ್ಕೆ ನಟ ಶಿವರಾಜ್ ಕುಮಾರ್ ಗರಂ ಆಗಿದ್ದಾರೆ.
ಕನ್ನಡ ಚಿತ್ರಕ್ಕೆ ಈಗ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ, ಯಾವ ಸಿನಿಮಾ ಹೇಗೆ ಓಡುತ್ತದೆ ಎಂದು ಯಾರಿಗೂ ಗೊತ್ತಾಗಲ್ಲ, ಹೇಳೋಕೂ ಆಗಲ್ಲ. ಕಾಂತಾರ ಸಿನಿಮಾ ನೋಡಿಲ್ವಾ..? ಕಾಂತಾರ ಸಿನಿಮಾ ಹಾಗೆ ಓಡುತ್ತದೆ ಎಂದು ಮೊದಲು ಯಾರಿಗಾದ್ರೂ ಗೊತ್ತಿತ್ತಾ..? ಯಾವ ಸಿನಿಮಾಗಳಿಗೂ ಅನ್ಯಾಯ ಆಗಬಾರದು ಎಂದಿದ್ದಾರೆ. ನೀವು ವಿತರಣೆ ತರೋದು ನಮಗೆ ಖಂಡಿತ ಹೊಟ್ಟೆ ಕಿಚ್ಚು ಅಲ್ಲ, ಸೌಹಾರ್ದಯುತವಾಗಿ ಮಾಡಿ.. ಎಂದಿದ್ದಾರೆ. ಲಿಯೋ, ಭಗವಂತ್ ಸಿನಿಮಾಗೆ ಪಿವಿಆರ್ ಮನ್ನಣೆ ನೀಡಿದ್ದು, ಕನ್ನಡಿಗರನ್ನು ಕೆರಳಿಸಿದೆ.
ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅಭಿನಯದ ‘ಘೋಸ್ಟ್’ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಮೊದಲ ಬಾರಿಗೆ ಶಿವಣ್ಣನಿಗೆ ಶ್ರೀನಿ ನಿರ್ದೇಶನ ಮಾಡಿದ್ದಾರೆ. ಕೇವಲ 48 ಗಂಟೆಗಳಲ್ಲಿ ನಡೆಯುವ ಈ ಕಥೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಹೇಳಿದ್ದಾರೆ. ಕೆಜಿಎಫ್’ ಸಿನಿಮಾ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ.ದಸರಾ ಹಬ್ಬದ ಹಿನ್ನೆಲೆ ರಜೆ ಇರುವುದರಿಂದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ.