
ರಾಯಚೂರು: ನಗರಸಭೆ ಜೆಡಿಎಸ್ ಸದಸ್ಯ ಮಕ್ಬೂಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕೀರ್ ಹುಸೇನ್ ವೃತ್ತದ ಬಳಿ ಮಕ್ಬೂಲ್ ಅವರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಸದರ್ ಬಜಾರ್ ಠಾಣೆ ಪೊಲೀಸರು ರಾಯಚೂರು ಹೊರ ವಲಯದಲ್ಲಿದ್ದ ಆರೋಪಿಗಳಾದ ರಿಯಾಜ್ ಮತ್ತು ಅಜ್ಜು ಎಂಬುವರ ಬಂಧನಕ್ಕೆ ತೆರಳಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಲೆತ್ನಿಸಿದಾಗ ಅವರ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.