ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ.
ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ ಗಿಡ, ಮರ ಹಾಗೂ ಸಣ್ಣ ದ್ವೀಪಗಳಿಂದ ಇದು ಕೂಡಿದ್ದು, ಸೈಬಿರಿಯಾ, ಉತ್ತರ ಅಮೆರಿಕ ಮೊದಲಾದ ದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ.
ಎಗ್ರೇಟ್, ಡಾಟರ್ಸ್, ಸ್ಪೂನ್ ಬಿಲ್, ಸ್ಟಾರ್ಕ್, ವೈಟ್ ಹೆರಾನ್ಸ್, ಪಾಂಡ್ ಹೆರಾನ್ಸ್, ಇವೇ ಮೊದಲಾದ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬರುತ್ತವೆ. ಹೀಗೆ ಬರುವ ಪಕ್ಷಿಗಳು, ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು, ಮರಿ ಬೆಳೆಸಿಕೊಂಡು ಜೊತೆಗೇ ಕರೆದುಕೊಂಡು ಹೋಗುತ್ತವೆ.
ಪಕ್ಷಿ ಪ್ರೇಮಿಗಳಿಗೆ ಇದೊಂದು ಸ್ವರ್ಗವಿದ್ದಂತೆ. ಪಕ್ಷಿಗಳನ್ನು ಹತ್ತಿರದಿಂದ ನೋಡಬಹುದಾಗಿದೆ. ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತದೆ. ಮೈಸೂರಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೂ ಹೋಗಿಬನ್ನಿ. ಪಕ್ಷಿಗಳ ಲೋಕದಲ್ಲಿ ಸಂಚರಿಸಿರಿ.