ರಾಮನಗರ: ರಾಮನಗರ ಜಿಲ್ಲೆ ಬೆಟ್ಟಹಳ್ಳಿಯಲ್ಲಿ ಯುವತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಕೃಷ್ಣಪ್ಪ, ದೊಡ್ಡಪ್ಪನ ಮಗ ಯೋಗೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಬೆಟ್ಟಹಳ್ಳಿಯಲ್ಲಿ ಅಕ್ಟೋಬರ್ 8 ರಂದು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಕೊಲೆ ಮಾಡಲಾಗಿತ್ತು.
ಮಗಳನ್ನು ಕೊಲೆ ಮಾಡಿದ ತಂದೆ ಕೃಷ್ಣಪ್ಪ ಅಕ್ಟೋಬರ್ 9 ರಂದು ಕುದೂರು ಠಾಣೆಗೆ ದೂರು ನೀಡಿದ್ದ. ಅಕ್ಟೋಬರ್ 10 ರಂದು ಮಾವಿನ ತೋಟದಲ್ಲಿ ಮೃತದೇಹ ಪತ್ತೆಯಾಗಿತ್ತು. ಯುವತಿಯನ್ನು ಕೊಲೆ ಮಾಡಿರುವ ಬಗ್ಗೆ ಪ್ರಿಯತಮನ ಮೇಲೆ ಆರೋಪ ಹೊರಿಸಲಾಗಿತ್ತು. ತನಿಖೆ ನಡೆಸಿದ ಕುದೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.