ಗಮನಿಸಿ: ರಾಜ್ಯದಲ್ಲಿ ಇಂದು ಹಾಗೂ ನಾಳೆ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ 06-01-2021 6:09PM IST / No Comments / Posted In: Karnataka, Latest News ರಾಜ್ಯದ ಹಲವು ಭಾಗಗಳಲ್ಲಿ ಸದ್ಯ ಭಾರೀ ಮಳೆ ಉಂಟಾಗುತ್ತಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಕೇಂದ್ರ ಮಾಹಿತಿ ನೀಡಿದ್ದು ಇಂದು ಹಾಗೂ ನಾಳೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಉಂಟಾಗಲಿದೆ ಎಂದು ಹೇಳಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಸಾಲಿನಲ್ಲಿ ಬರುವ ಬೀದರ್, ಕಲಬುರ್ಗಿ, ಯಾದಗಿರಿಯ ಬಹುತೇಕ ಭಾಗ, ರಾಯಚೂರು, ಬೆಳಗಾವಿ, ಕೊಪ್ಪಳ ಹಾಗೂ ಬಳ್ಳಾರಿಯ ಕೆಲ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಉಂಟಾಗಲಿದೆ. ವಿಜಯಪುರ, ಉತ್ತರ ಕನ್ನಡ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ , ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಬಹುತೇಕ ಪ್ರದೇಶಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಧಾರವಾಡ, ಗದಗ, ಚಿತ್ರದುರ್ಗದ ಬಹುತೇಕ ಭಾಗಗಳಲ್ಲಿ ಹಾಗೂ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಚಾಮರಾಜನಗರ, ಮೈಸೂರಿನ ಕೆಲ ಪ್ರದೇಶಗಳಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಇನ್ನು ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು, ಬಾಗಲಕೋಟೆ, ಹಾಗೂ ಹಾವೇರಿಯ ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾದ್ರೆ ಇದೇ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಂದ್ರೆ 204.4 ಮಿ.ಮೀ.ವರೆಗೆ ವರುಣ ಆರ್ಭಟಿಸಲಿದ್ದಾನೆ. ದಕ್ಷಿಣ ಕನ್ನಡದ ಅತಿ ಕಡಿಮೆ ಪ್ರದೇಶದಲ್ಲಿ 204.5 ಮಿ.ಮೀಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಉಂಟಾಗಲಿದೆ. ಯಾದಗಿರಿ ಹಾಗೂ ರಾಯಚೂರಿನ ಕೆಲ ಪ್ರದೇಶಗಳಲ್ಲಿ ಮಳೆ ಬೀಳುವ ಸಾಧ್ಯತೆ ಕಡಿಮೆ ಇದೆ.