ಬೆಂಗಳೂರು: ನೈರುತ್ಯ ರೈಲ್ವೆ ವತಿಯಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಆಧಾರಿತ ಪ್ಲಾಟ್ ಫಾರಂ ಟಿಕೆಟ್ ನೀಡುವ ಎರಡು ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ ರೈಲು ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಿದ್ದು, ನಂತರದಲ್ಲಿ ಪ್ಲಾಟ್ ಫಾರಂ ಪ್ರವೇಶಿಸಲು ನಿಯಮಾನುಸಾರ ಅವಕಾಶ ನೀಡಲಾಗಿದೆ. ಟಿಕೆಟ್ ಕೌಂಟರ್ ನಲ್ಲಿ ಜನಸಂದಣಿ ಉಂಟಾಗದಂತೆ ಎರಡು ಕಿಯೋಸ್ಕ್ ಅಳವಡಿಸಲಾಗಿದೆ.
ಸಾರ್ವಜನಿಕರು ಪೇಮೆಂಟ್ ಆಪ್ ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ಲಾಟ್ ಫಾರಂ ಟಿಕೆಟ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಸಲಾಗಿದೆ. ಬೇರೆ ರೈಲು ನಿಲ್ದಾಣಗಳಲ್ಲಿಯು ಇಂತಹ ಕಿಯೋಸ್ಕ್ ಗಳನ್ನು ಅಳವಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ ಎಂದು ಹೇಳಲಾಗಿದೆ.