ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಸೆಪ್ಟಂಬರ್ 7 ರಿಂದ 19 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ.
ಈ ಮೊದಲು ಸೆಪ್ಟಂಬರ್ 7 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಬೇಕಿತ್ತು. ವೇಳಾಪಟ್ಟಿ ಬದಲಾವಣೆ ಮಾಡಲಾಗಿದ್ದು, ಸೆಪ್ಟೆಂಬರ್ 7 ರಿಂದ 19 ರ ವರೆಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ.
ಸೆಪ್ಟಂಬರ್ 7 ರಂದು ಉರ್ದು, ಸಂಸ್ಕೃತ,
ಸೆಪ್ಟಂಬರ್ 8 ರಂದು ಇತಿಹಾಸ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ,
ಸೆಪ್ಟೆಂಬರ್ 9 ರಂದು ಹಿಂದಿ
ಸೆಪ್ಟಂಬರ್ 10 ರಂದು ಇಂಗ್ಲಿಷ್
ಸೆಪ್ಟೆಂಬರ್ 11 ರಂದು ಐಚ್ಛಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಸೆಪ್ಟೆಂಬರ್ 12 ರಂದು ಅರ್ಥಶಾಸ್ತ್ರ, ಭೌತಶಾಸ್ತ್ರ
ಸೆಪ್ಟಂಬರ್ 14 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ,, ಶಿಕ್ಷಣ
ಸೆಪ್ಟಂಬರ್ 15 ಕನ್ನಡ
ಸೆಪ್ಟಂಬರ್ 16 ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಸೆಪ್ಟಂಬರ್ 18 ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ
ಸೆಪ್ಟಂಬರ್ 19 ರಂದು ಭೂಗೋಳಶಾಸ್ತ್ರ
ನೂತನ ವೇಳಾಪಟ್ಟಿಯಂತೆ ಪೂರಕ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ನೂತನ ವೇಳಾಪಟ್ಟಿ ಗಮನಿಸುವಂತೆ ತಿಳಿಸಲಾಗಿದೆ.