ರಾಜ್ಯ ಸರ್ಕಾರ ಕೊರೊನಾ ಮೂರನೇ ಅಲೆಯನ್ನ ಎದುರಿಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ರಾಜ್ಯ ಸರ್ಕಾರ ಕೊರೊನಾ 2ನೆ ಅಲೆಯನ್ನ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಆರ್. ಅಶೋಕ್ ಈ ಹೇಳಿಕೆಯನ್ನ ನೀಡಿದ್ದಾರೆ.
ಕೊರೊನಾ ಮೂರನೇ ಅಲೆಯನ್ನ ಎದುರಿಸಲು ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ಸಜ್ಜಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಕೊರೊನಾ ವಿಶೇಷ ಟಾಸ್ಕ್ ಫೋರ್ಸ್ ರಚನೆಯಾಗಲಿದೆ. ಸಿಎಂ ಯಡಿಯೂರಪ್ಪ ಈ ವಿಶೇಷ ಟಾಸ್ಕ್ ಫೋರ್ಸ್ನ್ನು ಅಂತಿಮ ಮಾಡಲಿದ್ದಾರೆ. ಕೊರೊನಾ 3ನೇ ಅಲೆ ಹೆಚ್ಚಾಗಲು ಬಿಡೋದಿಲ್ಲ. ಪ್ರತಿ ಜಿಲ್ಲೆಯಲ್ಲೂ ಮಕ್ಕಳಿಗೆ ಪ್ರತ್ಯೇಕ ಕೇಂದ್ರಗಳನ್ನ ನಿರ್ಮಾಣ ಮಾಡುತ್ತೇವೆ. ಕಂದಾಯ ಇಲಾಖೆ ವತಿಯಿಂದ ಆರೈಕೆ ಕೇಂದ್ರಗಳನ್ನ ನಿರ್ಮಿಸಲಿದ್ದೇವೆ.
ಕೊರೊನಾ 2ನೇ ಅಲೆಯಲ್ಲಾದ ತಪ್ಪುಗಳು ಮೂರನೇ ಅಲೆಯಲ್ಲಿ ಪುನರಾವರ್ತನೆಯಾಗೋದಿಲ್ಲ ಎಂದು ಹೇಳಿದ್ರು.