
ಹಾಸನ: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ಮೊದಲನೇ ಮಗುವಿನ ಗರ್ಭಿಣಿ ಆರೈಕೆಗಾಗಿ ನೀಡುವ ನಗದು ಹಣ 5,000 ರೂ. ಗಳನ್ನು ಪಡೆಯಲು ಇಲಾಖೆ ವತಿಯಿಂದ ಅರ್ಜಿಗಳನ್ನು ಕೊಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕಾಗಿ ಹಾಸನ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.
ಲಗತ್ತಿಸಬೇಕಾದ ದಾಖಲೆಗಳು: ಗರ್ಭಿಣಿ ಸ್ತ್ರೀ ಮತ್ತು ಪತಿಯ ಆಧಾರ್ ಕಾರ್ಡ್ ಜೆರಾಕ್ಸ್, ಆರೋಗ್ಯ ತಪಾಸಣಾ ಚೀಟಿ ಜೆರಾಕ್ಸ್ ಅಥವಾ ತಾಯಿ ಕಾರ್ಡ್, ಗರ್ಭಿಣಿ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ನ ಪಾಸ್ ಬುಕ್ ಜೆರಾಕ್ಸ್ (ಖಾತೆಗೆ ಗರ್ಭಿಣಿ ಆಧಾರ್ ಲಿಂಕ್ ಆಗಿರಬೇಕು) ಲಗತ್ತಿಸಬೇಕು.
ವಿಶೇಷ ಸೂಚನೆ: ಸರ್ಕಾರಿ, ಅರೆ ಸರ್ಕಾರಿ ಉದ್ಯೋಗದಲ್ಲಿರುವ ಗರ್ಭಿಣಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಮೊದಲನೇ ಮಗುವಿನ ಗರ್ಭಿಣಿಯರು ಅರ್ಜಿ ಸಲ್ಲಿಸಬಹುದು. ಒಂದನೇ ಗರ್ಭಿಣಿ ಪತಿ ಸರ್ಕಾರಿ, ಅರೆ ಸರ್ಕಾರಿ ನೌಕರ ಆಗಿದ್ದರೂ ಕೂಡ ಒಂದನೇ ಗರ್ಭಿಣಿಯರು ಈ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರನ್ನು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಲಾಗಿದೆ.