
ತುಮಕೂರು: ತುಮಕೂರು ಜಿಲ್ಲೆಯ ಶಿರಾದಲ್ಲಿ 53 ವರ್ಷದ ಮಹಿಳೆಯೊಬ್ಬರು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ.
ಕೃಷಿಕ ಕುಟುಂಬದವರಾಗಿರುವ ದಂಪತಿಗೆ 11 ವರ್ಷದ ಮಗನಿದ್ದು, ದಂಪತಿ ಮತ್ತೊಂದು ಮಗುವಿನ ಪ್ರಯತ್ನದಲ್ಲಿದ್ದರು. ಗರ್ಭಿಣಿಯಾಗಿದ್ದ ಮಹಿಳೆಗೆ ಸೋಮವಾರ ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು ಅವಳಿ ಗಂಡು ಮಕ್ಕಳು ಜನಿಸಿವೆ. ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ.
ಆಧುನಿಕ ಜೀವನ ಶೈಲಿಯಿಂದಾಗಿ ವಯಸ್ಸು ಮೀರಿದ ನಂತರ ಮಕ್ಕಳು ಆಗುವ ಸಾಧ್ಯತೆ ಕಡಿಮೆಯಾಗಿದೆ. 53 ವರ್ಷದ ಮಹಿಳೆ ಜನ್ಮ ನೀಡಿರುವುದು ಅಪರೂಪದ ಪ್ರಕರಣವಾಗಿದೆ ಎಂದು ಹೇಳಲಾಗಿದೆ.