alex Certify ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ಘೋಷಿಸಿದ್ದ ಕಾಂಗ್ರೆಸ್ ನಾಯಕಿ; ಹಣವನ್ನು ಬಡ ಮಕ್ಕಳಿಗೆ ಹಂಚಿದ ಮಾಜಿ ಕಾರ್ಪೊರೇಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ನಾಯಕನ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ಘೋಷಿಸಿದ್ದ ಕಾಂಗ್ರೆಸ್ ನಾಯಕಿ; ಹಣವನ್ನು ಬಡ ಮಕ್ಕಳಿಗೆ ಹಂಚಿದ ಮಾಜಿ ಕಾರ್ಪೊರೇಟರ್

ಪುತ್ತೂರು: ಕೋಟಿ ಚೆನ್ನಯ್ಯರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದ ಬಿಜೆಪಿ ಮುಖಂಡ ಜಗದೀಶ್ ಪೂಜಾರಿ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂ. ಘೋಷಿಸಿದ್ದ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ, ಆ ಹಣವನ್ನು ಇದೀಗ ಬಡ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ.

ಈ ಕುರಿತು ಮಾತನಾಡಿದ ಪ್ರತಿಭಾ, ಕೋಟಿ ಚನ್ನಯ್ಯ ಹಾಗೂ ಬಿಲ್ಲವ ಸಮಾಜದ ಬಗ್ಗೆ ಜಗದೀಶ್ ಅಧಿಕಾರಿ ಅವಹೇಳನಕಾರಿಯಾಗಿ ಮಾತನಾಡಿದ್ದು, ತುಂಬಾ ಬೇಸರವಾಯಿತು. ಹೀಗಾಗಿ ಅವರ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ಘೋಷಿಸಿ 3 ದಿನದ ಗಡುವು ನೀಡಿದ್ದೆ. ಎರಡೇ ದಿನದಲ್ಲಿ ಅವರು ಗರಡಿ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿದ್ದಾರೆ. ಹಾಗಾಗಿ ನನ್ನ ಘೋಷಣೆ ವಾಪಸ್ ಪಡೆದುಕೊಂಡಿದ್ದು, ಆ ಹಣವನ್ನು 10 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಂಚಿದ್ದೇನೆ ಎಂದು ತಿಳಿಸಿದರು.

 ‘ಅಚ್ಚೇ ದಿನ್’ – ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಕಾರ್ಯಕರ್ತರು

ಅಲ್ಲದೇ ಗಜ್ಜೆಗಿರಿ ಮೂಲಕವೇ 20 ಬಡ ಮಕ್ಕಳನ್ನು ಆಯ್ಕೆ ಮಾಡಿಕೊಟ್ಟಲ್ಲಿ ಅವರ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುತ್ತೇನೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...