ಶ್ರೀಲಂಕಾದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಭಾಗಿಯಾಗಿರುವ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಿಡುಗಡೆ ಮಾಡಿದ್ದಾರೆ.
ಬಾಲಿಯಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ಶಾಸಕ ಜಮೀರ್ ಅಹಮದ್ ಇರುವುದಾಗಿ ಪ್ರಶಾಂತ್ ಸಂಬರಗಿ ಹೇಳಿದ್ದಾರಾದರೂ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿಲ್ಲ.
ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಧ್ವನಿ ಎತ್ತಿದ್ದು, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪಾರ್ಟಿಯ ದೃಶ್ಯವನ್ನು ರಿಲೀಸ್ ಮಾಡುವ ಮೂಲಕ ತಮ್ಮ ಮೇಲೆ ಕಿಡಿಕಾರಿದವರು ಸ್ಪಷ್ಟನೆ ನೀಡಲಿ ಎಂದು ಹೇಳಿದ್ದಾರೆ.
https://www.facebook.com/VS.Prashanth.Sambargi/posts/10158987643790712