ಕೊರೊನಾದಿಂದಾಗಿ ಸಾಕಷ್ಟು ಮಂದಿ ಪರಿತಪಿಸುವಂತಾಗಿದೆ. ಕರ್ನಾಟಕದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ. ಇನ್ನು ಸಾವಿನ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕಿತ ಜಿಲ್ಲೆಗಳ ಪೈಕಿ 13ನೇ ಸ್ಥಾನದಲ್ಲಿದೆ ದಕ್ಷಿಣ ಕನ್ನಡ. ಇದುವರೆಗೆ ಈ ಜಿಲ್ಲೆಯೊಂದರಲ್ಲೇ 143 ಪ್ರಕರಣಗಳು ದಾಖಲಾಗಿದೆ. ಹಾಗು ಆರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇದರ ನಡುವೆ ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಸಡಿಲಿಕೆಯ ನಂತರ ಸಾಕಷ್ಟು ಕೇಸ್‌ಗಳು ದಾಖಲಾಗಿವೆ. ಆದರೂ ಸಡಿಲಿಕೆ ಅನಿವಾರ್ಯವಾಗಿದೆ. ಹೀಗಾಗಿ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ಒಬ್ಬರು ತಮಗೆ ತಾವೇ ವೈಯಕ್ತಿಕ ರಕ್ಷಣಾ ಕವಚ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.
ಮಂಗಳೂರಿನಲ್ಲಿ ಬಸ್ ಕಂಡಕ್ಟರ್ ಪಿಪಿ ಕಿಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೌದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಶಕ್ತಿನಗರಕ್ಕೆ ತೆರಳುವ ಖಾಸಗಿ ಬಸ್ಸಿನ ಕಂಡಕ್ಟರ್‌ವೊಬ್ಬರ ಈ ಕೆಲಸ ಎಲ್ಲರ ಗಮನ ಸೆಳೆಯುತ್ತಿದೆ. ಜೊತೆಗೆ ಎಲ್ಲರಿಗೂ ಈ ರೀತಿಯ ಮುನ್ನೆಚ್ಚರಿಕಾ ಕ್ರಮ ಗಮನ ಸೆಳೆಯುತ್ತಿದೆ.